ಬೈರವೇಶ್ವರ ಬ್ಯಾಂಕ್​: ಚಿಕ್ಕರಂಗಣ್ಣ ತಂಡಕ್ಕೆ ಗೆಲುವು

Byreveshwara_Bank
Published on

ತುಮಕೂರು: ನಗರದ ಭೈರವೇಶ್ವರ ಸಹಕಾರಿ ಬ್ಯಾಂಕ್​ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಶುಕ್ರವಾರ ಸುಸೂತ್ರವಾಗಿ ನಡೆದು 15 ನಿರ್ದೇಶಕರು ಆಯೆಯಾದರು. ಹಾಲಿ ಅಧ್ಯಕ್ಷ ಟಿ.ಆರ್​.ವೆಂಕಟೇಶ್​ಬಾಬು ಹಾಗೂ ಮಾಜಿ ಅಧ್ಯಕ್ಷ ಟಿ.ಆರ್​.ಚಿಕ್ಕರಂಗಣ್ಣ ಸಿಂಡಿಕೇಟ್​ ನಡುವಿನ ಜಿದ್ದಾಜಿದ್ದಿ ಹೋರಾಟದಲ್ಲಿ, ಚಿಕ್ಕರಂಗಣ್ಣ ತಂಡದ 11 ಮಂದಿ ಹಾಗೂ ವೆಂಕಟೇಶ್​ಬಾಬು ಬಣದ 4 ಮಂದಿ ಚುನಾಯಿತರಾದರು.

ಫೆ.9ರಂದು ಬ್ಯಾಂಕ್​ ಚುನಾವಣೆ ನಡೆದಿದ್ದು 1250 ಮಂದಿ ಹೆಚ್ಚುವರಿಯಾಗಿ ಮತದಾನದ ಹಕ್ಕು ಪಡೆದಿದ್ದ ಹಿನ್ನೆಲೆ ಹೈಕೋರ್ಟ್​ ಮೆಟ್ಟಿಲೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಮತ ಎಣಿಕೆಯನ್ನು ಮಾ.14ಕ್ಕೆ ನಿಗದಿಪಡಿಸಲಾಗಿತ್ತು.

ಬ್ಯಾಂಕ್​ಗೆ 4 ಬಾರಿ ನಿರ್ದೇಶಕರಾಗಿ, 2 ಬಾರಿ ಅಧ್ಯಕ್ಷರಾಗಿರುವ ಟಿ.ಆರ್​.ಚಿಕ್ಕರಂಗಣ ್ಣ (1312ಮತ) , ಹಾಲಿ ಅಧ್ಯಕ್ಷ ವೆಂಕಟೇಶ್​ಬಾಬು (1022), ನಿರ್ದೇಶಕ ಬೆಳ್ಳಿ ಲೋಕೇಶ್​ (1009) ನಿರ್ದೇಶಕರಾಗಿ ಮರು ಆಯ್ಕೆಯಾದರು. ಇನ್ನುಳಿದಂತೆ ಸಾಮಾನ್ಯ ಕ್ಷೇತ್ರದಿಂದ ಬಿ.ಟಿ.ಲಕ್ಕೇಗೌಡ (1142), ಎಸ್​.ನಾರಾಯಣಗೌಡ (1084), ಕೆ.ನಟೇಶ್​ (1078), ಡಾ.ಟಿ.ಎಸ್​.ವಿಜಯಕುಮಾರ್​ (1029), ಸಿ.ಎಸ್​.ದೇವರಾಜ (1006),ವೈ.ಚಂದ್ರಶೇಖರ್​ (976) ಚುನಾಯಿತರಾದರು.

ಮಹಿಳಾ ಮೀಸಲು 2 ಸ್ಥಾನಗಳಿಗೆ ರಂಗಮಣಿ ಕಾಮೇಶ್​ (1056 ಮತ), ಎಸ್​.ಸೌಭಾಗ್ಯ (949 ಮತ) ಆಯ್ಕೆಯಾದರು. ಸಿ.ರಾಧಾ, ಎಚ್​.ಜಿ.ಸುಜಾತ ಸೋಲೊಪ್ಪಿಕೊಂಡರು. ಬಿಸಿಎಂ "ಎ' ಮೀಸಲು 1 ಸ್ಥಾನಕ್ಕೆ ಸಿ.ಕೃಷ್ಣಮೂರ್ತಿ (810ಮತ) , ಬಿಸಿಎಂ "ಬಿ' ಮೀಸಲು ಬೋರೇಗೌಡ (895 ಮತ) ಹಾಗೂ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಕೆ.ಬಿ.ಕಾಂತರಾಜು (901ಮತ), ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಪಿ.ಶಾಮಣ್ಣ (752 ಮತ) ಆಯ್ಕೆಯಾದರು.

ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವೆ: ಭೈರವೇಶ್ವರ ಸಹಕಾರ ಬ್ಯಾಂಕ್​ ನಗರದ ಪ್ರತಿಷ್ಠಿತ ಬ್ಯಾಂಕ್​ಗಳಲ್ಲಿ ಒಂದು. ಚುನಾವಣೆವರೆಗೆ ಮಾತ್ರ ತಂಡ, ಸಿಂಡಿಕೇಟ್​ ನಂತರ ಎಲ್ಲಾ ನಿರ್ದೇಶಕರೂ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುತ್ತಾರೆ. ಎಲ್ಲಾ ನಿರ್ದೇಶಕರನ್ನೂ ವಿಶ್ವಾಸಕ್ಕೆ ಪಡೆದು ಬ್ಯಾಂಕಿನ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸೋಣ ಎಂದು ಟಿ.ಆರ್​.ಚಿಕ್ಕರಂಗಣ್ಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net