

ವಿಜಯವಾಣಿ ಸುದ್ದಿಜಾಲ ಬೈಂದೂರು ಕಳೆದ ಏಳು ವರ್ಷಗಳಿಂದ ಉದ್ಘಾಟನೆ ನಿರೀಕ್ಷೆಯಲ್ಲಿರುವ ಬೈಂದೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ದೊಡ್ಡ ಸಮಸ್ಯೆ ಅಂದರೆ ಅದು ನೀರು. ಇದೀಗ ಹೇಗಾದರೂ ವಾಡಿ ಉದ್ಘಾಟನೆ ವಾಡಬೇಕೆನ್ನುವ ಧಾವಂತದಲ್ಲಿ ಅಧಿಕಾರಿಗಳು ಎರಡು ಕಿ.ಮೀ ದೂರದಿಂದ ಪೈಪ್‌ಲೈನ್ ಮೂಲಕ ನೀರು ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸಲವಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ. ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೀರಿನ ಸಮಸ್ಯೆಯೇ ಬಹುದೊಡ್ಡ ತಲೆನೋವಾಗಿದೆ. ತೆರೆದ ಬಾವಿ, ಬೋರ್‌ವೆಲ್ ತೋಡಿದರೂ ಸಿಕ್ಕಿದ್ದು ಉಪ್ಪುನೀರು. ಕಾಮಗಾರಿ ಆರಂಭಿಸುವ ವೇಳೆ ಈ ಬಗ್ಗೆ ವಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಿದ ಪರಿಣಾಮ ಹನಿ ನೀರೂ ಸಿಗದ ಜಾಗದಲ್ಲಿ ಬಸ್ ನಿಲ್ದಾಣ ತಲೆ ಎತ್ತುವಂತಾಗಿದೆ. ಈ ಸಮಸ್ಯೆ ಬಗೆಹರಿಸಲು ಪೈಪ್‌ಲೈನ್ ಮೂಲಕ ನೀರು ಪಡೆಯುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಇಲಾಖೆ ವತಿಯಿಂದ 20 ಲಕ್ಷ ರೂ. ಹೆಚ್ಚುವರಿ ಅನುದಾನ ವ್ಯಯಿಸಲಾಗಿದೆ. ಬೈಂದೂರು ಬಸ್ ನಿಲ್ದಾಣ 2018ರಲ್ಲಿ ಶಂಕುಸ್ಥಾಪನೆಯಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ, 6 ಕೋಟಿ ರೂ. ವೆಚ್ಚದಲ್ಲಿ ಡಿಪೋ ನಿರ್ವಾಣಕ್ಕೆ ಅನುಮೋದನೆ ನೀಡಲಾಗಿತ್ತು. ಕಾಮಗಾರಿಗೆ ಅನುದಾನದ ಕೊರತೆ ಇದೆ ಎಂದು ಹಲವು ಬಾರಿ ನಿಂತು ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಗ್ಗೆ ವಿಜಯವಾಣಿ ಹಲವು ಬಾರಿ ವರದಿ ಪ್ರಕಟಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಲ್ಲೂರು ಭೇಟಿ ನೀಡುವ ನಿರೀಕ್ಷೆ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲೇ ತರಾತುರಿಯಲ್ಲಿ ಬಸ್ ನಿಲ್ದಾಣ ಉದ್ಘಾಟಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ದೂರದಿಂದ ಪೈಪ್‌ಲೈನ್ ಮೂಲಕ ನೀರು ತರುವ ಪ್ರಯತ್ನ ನಡೆಯುತ್ತಿದೆ. ಬಸ್ ನಿಲ್ದಾಣ ಉದ್ಘಾಟನೆಗೂ ಮುನ್ನ ಅಗತ್ಯ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟವರು ಗಮನ ಹರಿಸಬೇಕಿದೆ.
ನೂತನ ಸರ್ಕಾರಿ ಬಸ್ ನಿಲ್ದಾಣ ಉದ್ಘಾಟನೆಯಾದರೆ ಬೈಂದೂರಿನ ಅಭಿವೃದ್ಧಿಗೆ ಸಾಕಷ್ಟು ಸಹಕಾರಿಯಾಗಲಿದೆ. ಸುಸಜ್ಜಿತ ಬಸ್ ನಿಲ್ದಾಣದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಅನುಕೂಲ ವಾಡಿಕೊಡಬೇಕು. -ಗುರುರಾಜ ಗಂಟಿಹೊಳೆ, ಬೈಂದೂರು ಶಾಸಕ ಪ್ರಸ್ತುತ ಬಸ್ ನಿಲ್ದಾಣಕ್ಕೆ ಬಸ್‌ಗಳು ಬರಲು ಸಮರ್ಪಕ ವ್ಯವಸ್ಥೆಗಳಿಲ್ಲ. ಬಸ್ ನಿಲ್ದಾಣದ ಎದುರುಗಡೆ ಡಿವೈಡರ್ ನೀಡಲು ಹೆದ್ದಾರಿ ಅಧಿಕಾರಿಗಳ ತಾಂತ್ರಿಕ ಅನುಮೋದನೆ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಸಮಸ್ಯೆಗಳಿಗೆ ವ್ಯವಸ್ಥೆಯಾಗಬಹುದು. -ಮೋಹನ ಪೂಜಾರಿ, ಬೈಂದೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬೈಂದೂರು ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ನೀರಿನ ಅವಶ್ಯಕತೆಗಾಗಿ ಪೈಪ್‌ಲೈನ್ ಮೂಲಕ ವ್ಯವಸ್ಥೆ ವಾಡಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದು ತಿಂಗಳ ಒಳಗೆ ನೂತನ ಬಸ್ ನಿಲ್ದಾಣ ಉದ್ಘಾಟನೆಯಾಗಲಿದೆ. -ಹರೀಶ್ ಸಹಾಯಕ ಅಭಿಯಂತರ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ https://www.vijayavani.net/good-opportunity-for-those-who-do-social-service https://www.vijayavani.net/creative-college-team-is-the-overall-champion