

ಕಂಪ್ಲಿ: ಮತದಾನ ಮಾಡುವ ಮೂಲಕ ಚುನಾವಣೆಯನ್ನು ಹಬ್ಬದಂತೆ ಆಚರಿಸಬೇಕು ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ,ತಾಪಂ ಇಒ ಕೆ.ಎಸ್.ಮಲ್ಲನಗೌಡ ಹೇಳಿದರು.
ಪಟ್ಟಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಸದೃಢ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಈ ಬಾರಿ ಪ್ರತಿ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನ ಸಾಧಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಕಾಲ್ನಡಿಗೆ ಜಾಥಾ ಪುರಸಭೆ ಕಚೇರಿಯಿಂದ ಪ್ರಮುಖ ಬೀದಿ ಮೂಲಕ ಕಡಿಮೆ ಮತದಾನವಾದ ಕಲ್ಗುಡಿ ಓಣಿ ಮತಗಟ್ಟೆ ಪ್ರದೇಶಾದ್ಯಂತ ಸಂಚರಿಸಿತು. ಪ್ರತಿ ಮನೆ ಮನೆಗೂ ಮತದಾನ ಜಾಗೃತಿ ಕರಪತ್ರ ವಿತರಿಸಲಾಯಿತು.ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ, ವ್ಯವಸ್ಥಾಪಕಿ ಅಪರಂಜಿ, ಇಸಿಒ ಜಿ.ವೀರೇಶ್, ಮಹಿಳಾ ಮೇಲ್ವಿಚಾರಕಿಯರಾದ ಲತೀಫಾಬೇಗಮ್, ಅಕ್ಷತಾ ಮಸ್ಕಿ, ಉಷಾಸಿಂಗ್, ರೇಣುಕಾ,ಆಶಾ, ಅಂಗನವಾಡಿ ಕಾರ್ಯಕರ್ತರು, ತಾಪಂ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.