ಕಿಡಿಗೇಡಿಗಳಿಂದ ಬೆಳೆ ನಾಶ

04ALD05
ಹಟ್ಟಿ ಗ್ರಾಮದ ರೈತ ಶೇಖರಪ್ಪನ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ,
Published on

ಅಳವಂಡಿ: ಸಮೀಪದ ಹಟ್ಟಿ ಗ್ರಾಮದ ರೈತ ಶೇಖರಪ್ಪ ಪಕೀರಪ್ಪ ಹಳ್ಳಿ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಗಿಡವನ್ನು ಕಿಡಿಗೇಡಿಗಳು ಶುಕ್ರವಾರ ರಾತ್ರಿ ಕಿತ್ತು ನಾಶ ಮಾಡಿದ್ದಾರೆ. ರೈತನ ಪರಿಸ್ಥಿತಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಬೋರ್ವೆಲ್ ಹಾಗೂ ಹಳ್ಳದ ನೀರಿನಿಂದ 10 ಎಕರೆ ಜಮೀನಿನಲ್ಲಿ ಬ್ಯಾಡಗಿ ಮೆಣಸಿನಕಾಯಿ ಗಿಡಗಳನ್ನು ನಾಟಿ ಮಾಡಿದ್ದು. ಗಿಡಗಳು ಹುಲುಸಾಗಿ ಬೆಳೆದು ಉತ್ತಮ ಫಸಲು ಬಿಟ್ಟು ನಳನಳಿಸುತ್ತಿದ್ದವು. ಕಿಡಿಗೇಡಿಗಳು ಸುಮಾರು ಒಂದುವರೆ ಎಕರೆ ಜಮೀನಿನ ಮೆಣಸಿನಕಾಯಿ ಗಿಡಗಳನ್ನು ಕಿತ್ತು ನಾಶ ಮಾಡಿದ್ದಾರೆ.

ಎಕರೆ ಮೆಣಸಿನಕಾಯಿ ಬೆಳೆಸಲು ಒಂದು ಲಕ್ಷ ರೂ.ವರೆಗೆ ಖರ್ಚು ಮಾಡಲಾಗಿದೆ. ಎಕರೆಗೆ ಸಸಿಗಳಿಗೆ 15 ಸಾವಿರ ರೂ., ಗೊಬ್ಬರಕ್ಕೆ 20 ಸಾವಿರ ರೂ., ರಾಸಾಯನಿಕ ಸಿಂಪಡನೆಗೆೆ 20 ಸಾವಿರ ರೂ., ಉಳುಮೆ, ನೀರು ಹರಿಸು ಹಾಗೂ ಕಳೆ ಖರ್ಚು ಸುಮಾರು 25 ಸಾವಿರ ರೂ. ಖರ್ಚು ಆಗಿದೆ.

ಶುಕ್ರವಾರ ರಾತ್ರಿ ಕಿಡಿಗೇಡಿಗಳು ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಗಿಡಗಳನ್ನು ಮುರಿದು ನಾಶ ಮಾಡಿದ್ದಾರೆ. ಇದರಿಂದ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ. ಗುಂಡಪ್ಪ ಹಳ್ಳಿ, ಹಟ್ಟಿ ಗ್ರಾಮದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net