More

    ರಂಗಕಲೆ ಉಳಿಸಿ ಬೆಳೆಸಿ

    ಕೆ.ಎಂ.ದೊಡ್ಡಿ: ರಂಗಕಲೆಗಳು ನಶಿಸುತ್ತಿರುವ ದಿನಗಳಲ್ಲಿ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ನಾಟಕೋತ್ಸವ ಆಯೋಜಿರುವುದು ಸಂತಸದ ಸಂಗತಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ತಿಳಿಸಿದರು.

    ಇಲ್ಲಿನ ಹಳೇ ಸ್ಟೇಟ್ ಬ್ಯಾಂಕ್ ಸಮೀಪ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದಲ್ಲಿ ಏಳು ದಿನಗಳ ಕಾಲ ನಡೆಯುವ ಗ್ರಾಮೀಣ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ರಂಗಕಲೆ ಉಳಿಸಿ, ಗ್ರಾಮೀಣ ಸೊಗಡನ್ನು ಹೆಚ್ಚು ಪಸರಿಸಬೇಕು ಎಂದರು.

    ಚಿಕ್ಕರಸಿನಕೆರೆ ಹೋಬಳಿ ಸೇರಿದಂತೆ ಮದ್ದೂರು ತಾಲೂಕಿನಲ್ಲಿ ಅನೇಕ ಸಂಘಗಳನ್ನು ರಚಿಸಿದ್ದು ಅದರಲ್ಲೂ ಉತ್ತಮ ಕಲಾವಿದರಿದ್ದಾರೆ. ಒಬ್ಬರನ್ನು ಮತ್ತೊಬ್ಬರು ಮೀರಿಸುವ ರೀತಿ ಅಭಿನಯಿಸುವ ಮೂಲಕ ರಂಗಕಲೆಗೆ ಗೌರವ ನೀಡುತ್ತ ಅವುಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
    ರಂಗಭೂಮಿ ನಾಟಕ ಆಗಾಗ್ಗೆ ನಡೆದರೆ ಹಲವು ರಂಗಭೂಮಿ ಕಲಾವಿದರ ಕುಟುಂಬಗಳು ಉಳಿಯುತ್ತವೆ. ಹೀಗಾಗಿ ರಂಗಕಲೆ ಪೋತ್ಸಾಹಿಸಬೇಕೆಂದು ಮನವಿ ಮಾಡಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಮೊಬೈಲ್ ಮತ್ತು ಟಿವಿ ಧಾರಾವಾಹಿಗಳಿಂದ ರಂಗಕಲೆ ಅವನತಿಯ ಅಂಚಿಗೆ ತಲುಪುತ್ತಿರುವುದು ವಿಷಾದನೀಯ ಎಂದರು.

    ಬೆಳ್ಳಿ ಕಿರೀಟ ಮತ್ತು ಬಂಗಾರದ ಕಡಗ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಕ್ಕೂ ಹೆಚ್ಚು ಕಲಾವಿದರನ್ನು ಅಭಿನಂದಿಸಲಾಯಿತು.

    ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಜ್ಯೋತಿ ಯುವಕರ ಸಂಘದ ಅಧ್ಯಕ್ಷ ತೈಲೂರು ಸಿದ್ದರಾಜು, ಪರಿಸರ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್, ಯುವ ಮುಖಂಡ ತಿಪ್ಪೂರು ಕೃಷ್ಣ, ಕಲಾವಿದರಾದ ದ್ಯಾಪೇಗೌಡ, ರಾಮನಗರ ವಿಜಯ್‌ಕುಮಾರ್, ಮೈನಾಕನಹಳ್ಳಿ ರವಿ, ರಾಮನಗರ ಚಿನ್ನಗಿರಿಗೌಡ, ದೇವರಹಳ್ಳಿ ದೇವರಾಜು, ಪುಟ್ಟರಾಜು, ಕಳ್ಳಿಮೆಳ್ಳೆದೊಡ್ಡಿ ಸಿದ್ದರಾಜು, ಎಂ.ಟಿ.ಪುಟ್ಟಸ್ವಾಮಿ, ತಿಪ್ಪೂರು ಅಂದಾನಿ, ಅರೆಚಾಕನಹಳ್ಳಿ ಚಿಕ್ಕಬೋರೆಗೌಡ, ಕ್ಯಾತಘಟ್ಟದ ಸುನೀಲ್, ಅಣ್ಣೂರು ಈಶಪ್ರಸಾದ್, ಕೆಂಚೇಗೌಡ, ಚೌಡೇಶ್, ಗುರುಮೂರ್ತಿ, ಬಚ್ಚೇಗೌಡ, ಪುಟ್ಟಸ್ವಾಮಿ, ತಮ್ಮಯ್ಯ, ಸಿದ್ದೇಗೌಡ, ಲೋಕೇಶ್ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts