

ಕಡಬ: ಪ್ರವಾದಿ ಮಹಮ್ಮದ್ ಪೈಗಂಬರರು ಸೌಹಾರ್ದ, ಭ್ರಾತೃತ್ವ, ಒಗ್ಗಟ್ಟಿಗೆ ಒತ್ತು ಕೊಟ್ಟವರು. ಅವರ ಸಂದೇಶ ಪಾಲನೆ ಆದರೆ ಮಾತ್ರ ನೆಬಿ ದಿನ ಆಚರಣೆ ಸಾರ್ಥಕ ಆಗಲು ಸಾಧ್ಯ ಎಂದು ಗಂಡಿಬಾಗಿಲು ಮಸೀದಿ ಖತೀಬ್ ಅಬ್ದುಲ್ ಹಮೀದ್ ಶೌಕತ್ ಅಲಿ ಫೈಝಿ ಹೇಳಿದರು.
ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ನುಜೂಮುಲ್ ಇಸ್ಲಾಂ ಯಂಗ್ಮೆನ್ಸ್ ವತಿಯಿಂದ ಹಮ್ಮಿಕೊಳ್ಳಲಾದ ಈದ್&ಮಿಲಾದ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.
ಗಂಡಿಬಾಗಿಲಿನಿಂದ ಹೊರಟ ಮಿಲಾದ್ ಮೆರವಣಿಗೆ ಕೊೃಲ, ನೀರಾಜೆ ಮದ್ರಸದಲ್ಲಿ ಸಮಾಗಮಗೊಂಡು ಅಲ್ಲಿಂದ ಬಳಿಕ ಕೆಮ್ಮಾರ ಶಾಲಾ ಬಳಿ ತನಕ ಸಾಗಿ ಮರಳಿ ಬಂದು ಗಂಡಿಬಾಗಿಲು ಶಾಲಾ ತನಕ ಸಾಗಿ ಬಂದು ಮಸೀದಿ ಬಳಿ ಸಮಾಪನಗೊಳಿಸಲಾಯಿತು. ಮೆರವಣಿಗೆ ಬಳಿಕ ಮಸೀದಿಯಲ್ಲಿ ಮೌಲೀದ್ ಪಾರಾಯಣ, ಅನ್ನ ಸಂತರ್ಪಣೆ ನಡೆಯಿತು. ಬೆಳಗ್ಗೆ ಧ್ವಜಾರೋಹಣ ಯಂಗ್ಮೆನ್ಸ್ ಅಧ್ಯಕ್ಷ ಪಿ.ಲತೀಫ್ ನೆರವೇರಿಸಿದರು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಸೀದಿ ಅಧ್ಯಕ್ಷ ಆದಂ ಹಾಜಿ, ಪ್ರಧಾನ ಕಾರ್ಯದರ್ಶಿ ಎಸ್.ಆದಂ ಹಾಜಿ, ಉಪಾಧ್ಯಕ್ಷ ಜಿ.ಮಹಮ್ಮದ್ ರಫೀಕ್, ಖಜಾಂಚಿ ಹಸೈನಾರ್ ಹಾಜಿ, ಜತೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಮರ್ವೇಲ್, ಜಿ.ಅಬ್ದುಲ್ ರಜಾಕ್, ನಝೀರ್ ಪೂರಿಂಗ, ಎಸ್.ಅಬ್ದುಲ್ ರಹಿಮಾನ್, ಝಕರಿಯಾ ನೇರೆಂಕಿ, ಎಸ್.ರಜಾಕ್, ಅಬ್ದುಲ್ ರಹಿಮಾನ್ ಅದ್ದ, ಗಂಡಿಬಾಗಿಲು ನುಜೂಮುಲ್ ಇಸ್ಲಾಂ ಯಂಗ್ಮೆನ್ಸ್ ಅಧ್ಯಕ್ಷ ಪಿ.ಅಬ್ದುಲ್ ಲತೀಫ್, ಕಾರ್ಯದರ್ಶಿ ಝಿಯಾದ್, ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಫೈಝಿ, ಬದ್ರುದ್ದೀನ್ ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಇಸಾಕ್ ಬೊಲುಂಬುಡ, ಪದಾಧಿಕಾರಿಗಳಾದ ಖಲಂದರ್ ಎಸ್.ಪಿ, ಆಶಿಫ್ ಜಿ.ಎಂ, ಅನಸ್, ರಾಹಿಲ್, ಸಾಕಿರ್, ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.