ಶರಣರ ವೇಷ- ಭೂಷಣ ತೊಟ್ಟ ವಿದ್ಯಾರ್ಥಿಗಳು

1 NRD-4- sharanaru
Published on

ನರಗುಂದ: ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ವಚನಾಮೃತ ಕಾರ್ಯಕ್ರಮದಲ್ಲಿ ತಾಲೂಕಿನ ಕಲಕೇರಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಶರಣರ ವಿವಿಧ ವೇಷ- ಭೂಷಣ ತೊಟ್ಟು ಶನಿವಾರ ಕಿರು ರೂಪಕ ಪ್ರದರ್ಶಿಸಿದರು.
ಪೊ.ಆರ್.ಬಿ. ಚಿನಿವಾಲರ ಮಾತನಾಡಿ, 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಮತ್ತು ನಾವೆಲ್ಲ ಸಮಾನರು ಎಂದು ನೀಡಿದ ಆದರ್ಶರ್ಳು ಬಹಳಷ್ಟು ಉಪಯೋಗಕಾರಿಯಾಗಿ ವಚನ ಸಾಹಿತ್ಯದ ಮೈಲಿಗಲ್ಲು ಎಂದೆಂದಿಗೂ ಸ್ಮರಣಿಯವಾಗಿ ರೂಪಗೊಂಡಿವೆ ಎಂದು ತಿಳಿಸಿದರು.
ನರಗುಂದ ಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ ಮುರುಘರಾಜೇಂದ್ರ ಪ್ರಿ ಬೋರ್ಡಿಂಗ್ ಟ್ರಸ್ಟ್ ಮತ್ತು ಕದಳಿ ಮಹಿಳಾ ಮಹಾವೇದಿಕೆಯಿಂದ ಆಯೋಜಿಸಿದ್ದ 27ನೇ ದಿನದ ವಚನಾಮೃತ ಶ್ರಾವಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಬಸವಣ್ಣನವರ ಮಹತ್ವದ ಅನೇಕ ಆದರ್ಶಗಳನ್ನು ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಐ. ಅಂಕಲಿ, ಮಾರುತಿ ಭೋಸಲೆ, ಗಂಗಪ್ಪ ಕನ್ಯಾಳ, ಪತ್ರೆಪ್ಪ ಹಡಪದ, ಸೀಮಣ್ಣ ಗೋವೇಶ್ವರ, ಸಿ.ಎಚ್. ಕೋರಿ,ಎಸ್.ವೈ. ಹುಂಬಿ, ಬಸವರಾಜು ಗೋವೇಶ್ವರ, ವಿ.ಎನ್. ಕೊಳ್ಳಿಯವರ, ಶಿವಪ್ಪ ಬೋಳಶೆಟ್ಟಿ,ಬಿ.ಎಚ್. ಕ್ಯಾರಕೊಪ್ಪ. ಬಿ.ಎಸ್. ನಾಶಿಶೆಟ್ರ, ಶಂಕ್ರಣ್ಣ ವಾಳದ, ಸುದರ್ಶನ ಅಂಬೇಕರ್, ಎಸ್.ವೈ. ಭಜಂತ್ರಿ, ಗಂಗಮ್ಮ ಪಾಟೀಲ, ಕಲಾಶ್ರೀ ಹಾದಿಮನಿ, ನಾಗರತ್ನಾ ಜಾಧವ, ಮಂಜುಳಾ ಅಸುಂಡಿ, ಮಾಲಾ ನೇಸರಗಿ ಇದ್ದರು. ಕಲಾಶ್ರೀ ಹಾದಿಮನಿ ನಿರ್ವಹಿಸಿದರು. ಟಿ.ಆರ್. ಉಳ್ಳೇಗಡ್ಡಿ ವಚನ ಸಂಗೀತ ಪ್ರಸ್ತುತಪಡಿಸಿದರು. ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕದ ಅಧ್ಯಕ್ಷ ಆರ್.ಎಚ್. ತಿಗಡಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net