ಸ್ವಚ್ಛತಾ ಕಾರ್ಮಿಕರಿಗೆ ಅನ್ನಭಾಗ್ಯ

BWSSB-office
Published on

ಬೆಂಗಳೂರು: ನಗರವನ್ನು ಸ್ವಚ್ಛವಾಗಿ ಇಡಲು ಹಗಲು-&ರಾತ್ರಿ ಶ್ರಮಿಸುತ್ತಿರುವ ಜಲಮಂಡಳಿ ನೈರ್ಮಲ್ಯೀಕರಣ ಕಾರ್ಮಿಕರ ಆರೋಗ್ಯ, ಗೌರವ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅನ್ನಪೂರ್ಣ ಯೋಜನೆಯನ್ನು ರೂಪಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ದೇಶದ ಇನ್ನಿತರ ಪಾಲಿಕೆಗಳಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಆಹಾರ ನೀಡುವ ವ್ಯವಸ್ಥೆ ಇದೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳ ಜೊತೆಗೂಡಿ ಕಾರ್ಮಿಕರಿಗಾಗಿ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರು ಜಲಮಂಡಳಿಯು ದೇಶದಲ್ಲೇ ಮೊದಲ ಬಾರಿಗೆ ತಂತ್ರಜ್ಞಾನ ಆಧಾರಿತವಾಗಿ ಹಾಗೂ ಪ್ರತಿ ತಿಂಗಳೂ ನೇರವಾಗಿ ಕಾರ್ಮಿಕರಿಗೆ ಹಣ ವರ್ಗಾವಣೆ ಮಾಡುವ ಜಲಮಂಡಳಿ ಅನ್ನಪೂರ್ಣ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.

ಈ ಯೋಜನೆಯ ಅಡಿಯಲ್ಲಿ ಜಲಮಂಡಳಿಯ 700ಕ್ಕೂ ಹೆಚ್ಚು ನೈರ್ಮಲ್ಯೀಕರಣ ಕಾರ್ಮಿಕರಿಗೆ ಸ್ಮಾರ್ಟ್​ಕಾರ್ಡ್​ ವಿತರಿಸಲಾಗುವುದು. ಖಾಸಗಿ ಬ್ಯಾಂಕಿನ ಜೊತೆಗೂಡಿ ಹೊರತಂದಿರುವ ಈ ಕಾರ್ಡ್​ಗೆ ಪ್ರತಿತಿಂಗಳು ನೇರವಾಗಿ 1,500 ರೂ.ಪಾವತಿಸಲಾಗುವುದು ಎಂದು ರಾಮ್​ ಪ್ರಸಾತ್​ ಮನೋಹರ್​ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net