

ಬೆಂಗಳೂರು: ಕೆಂಗೇರಿ ಉಪನಗರದ ಸುಭಾಷ್ನಗರ ವ್ಯಾಪ್ತಿಯಲ್ಲಿ ಇರುವ ಇತ್ತೀಚೆಗೆ ಅಭಿವೃದ್ಧಿ ಪಡಿಸಲಾದ ಕೆರೆಗೆ ತ್ಯಾಜ್ಯ ನೀರನ್ನು ಬಿಟ್ಟಿದ್ದು, ಭಾಗಶ@ ಕೆರೆ ಮಾಲಿನ್ಯದಿಂದ ಕೂಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಈ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಈ ಕೆರೆಯಲ್ಲಿ ನೀರು ತುಂಬಿಕೊಂಡಿದ್ದು, ಡೆನೇಜ್ ನೀರು ಬಿಡುವ ಮೂಲಕ ಈ ಕೆರೆಯನ್ನು ಉಪಯೋಗ ಶೂನ್ಯಗೊಳಿಸಲಾಗಿದೆ. ಪ್ಲಾಸ್ಟಿಕ್ ಬಾಟಲ್ಗಳು ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳೇ ಹೆಚ್ಚಾಗಿ ತುಂಬಿಕೊಂಡಿದ್ದು, ತ್ಯಾಜ್ಯ ನೀರು ಕೂಡ ಹಸಿರು ಬಣ್ಣಕ್ಕೆ ತಿರುಗಿದೆ. ಸುತ್ತಮುತ್ತಲ ನಿವಾಸಿಗಳಿಗೆ ಕರೆಯ ಪರಿಸರದಲ್ಲಿ ಓಡಾಡಲು ಕಷ್ಟವಾಗುತ್ತಿದ್ದು, ಮೂಗುಮುಚ್ಚಿಕೊಂಡೇ ಓಡಾಡುವ ಸ್ಥಿತಿ ನಿರ್ಮಾಣವಾಗದೆ.
ನುಣುಚಿಕೊಳ್ಳುತ್ತಿರುವ ಅಧಿಕಾರಿಗಳು: ಸಮಸ್ಯೆಯ ತೀವ್ರತೆಯ ಬಗ್ಗೆ ಅಧಿಕಾರಿಗಳನ್ನು ಮನದಟ್ಟು ಮಾಡುವ ಪ್ರಯತ್ನಕ್ಕೆ ಸ್ಥಳಿಯರು ಮುಂದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಲ್ಲಿ ಪ್ರಶ್ನಿಸುವಾಗ ಇದು ಇನ್ನೊಂದು ಭಾಗದಿಂದ ತ್ಯಾಜ್ಯ ನೀರು ಬರುತ್ತಿದೆ ಎಂದೂ, ಆ ಭಾಗದ ಅಧಿಕಾರಿಗಳಲ್ಲಿ ಕೇಳಿದಾಗ ಮೇಲಧಿಕಾರಿಯನ್ನು ಸಂಪರ್ಕಿಸುವಂತೆಯೂ ಸಾಬೂಬು ಹೇಳಿ ಅಧಿಕಾರಿಗಳು ನುಣಿಚಿಕೊಳ್ಳುತ್ತಿದ್ದಾರೆ. ಭಾಗಶ@ ಕೆರೆ ಮಲಿನಜಲ, ತ್ಯಾಜ್ಯದಿಂದ ಕೂಡಿದ್ದು, ಇದು ಜಲಮೂಲಕ್ಕೂ, ಪರಿಸರಕ್ಕೂ, ಪ್ರಾಣಿ ಪಗಳಿಗೂ ಕೆಡುಕುಂಟು ಮಾಡುತ್ತಿದೆ. ಸಂಬಂಧಪಟ್ಟವರೂ ಶ್ರೀ ಈ ಸಮಸ್ಯೆಯನ್ನು ಪರಿಹರಿಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.