'ಗ್ರೀನ್​ ಸ್ಟಾರ್​ ಚಾಲೆಂಜ್​'ಗೆ ಉತ್ತಮ ಪ್ರತಿಕ್ರಿಯೆ; 629ಕ್ಕೂ ಹೆಚ್ಚು ಸಂಪರ್ಕಗಳ ನೋಂದಣಿ

BWSSB
Published on

ಬೆಂಗಳೂರು: ನೀರು ಉಳಿತಾಯದ ಕ್ರಮಗಳನ್ನು ಅನುಸರಿಸಲು ಬೆಂಗಳೂರು ಜಲಮಂಡಳಿ ಆರಂಭಿಸಿರುವ 'ಗ್ರೀನ್​ ಸ್ಟಾರ್​ ಚಾಲೆಂಜ್​'ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ರೇಟಿಂಗ್​ ಪಡೆಯಲು ಎರಡು ವಾರಗಳಲ್ಲಿ 629ಕ್ಕೂ ಹೆಚ್ಚು ಕಟ್ಟಡಗಳು ಹಾಗೂ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ.

'ನೀರು ಉಳಿಸಿ - ಬೆಂಗಳೂರು ಬೆಳೆಸಿ' ಕಾರ್ಯಕ್ರಮದ ಭಾಗವಾದ ಪಂಚಸೂತ್ರಗಳನ್ನು ಅಳವಡಿಸಿಕೊಂಡು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜಲಮಂಡಳಿ ಕರೆ ನೀಡಿತ್ತು. ಇದನ್ನು ಬೆಂಗಳೂರು ಆಪಾರ್ಟ್​ಮೆಂಟ್​ ಫೆಡರೇಷನ್​, ಎಫ್​ಕೆಸಿಸಿಐ, ಪೀಣ್ಯ ಕೈಗಾರಿಕಾ ಸಂಸ್ಥೆ, 'ಕ್ರೆಡೈ' ಬೆಂಗಳೂರು ಸೇರಿ ಹಲವು ಸಂ& ಸಂಸ್ಥೆಗಳು ಬೆಂಬಲಿಸಿದ್ದವು.

ಗ್ರೀನ್​ ಸ್ಟಾರ್​ ಚಾಲೆಂಜ್​ನ ನೋಂದಣಿಗಾಗಿ ಸಿದ್ಧಪಡಿಸಿದ ವೆಬ್​ ಪೋರ್ಟಲ್​ಗೆ ಏ. 17ರಂದು ಚಾಲನೆ ದೊರೆತಿತ್ತು. ಈ ವೆಬ್​ಸೈಟ್​ ಮೂಲಕ ಈವರೆಗೆ 416ಕ್ಕೂ ಹೆಚ್ಚು ಅಪಾರ್ಟ್​ಮೆಂಟ್​, 68ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆ, 2 ಐಟಿ ಪಾರ್ಕ್​, 13 ಐಟಿ ಕಂಪನಿ, 52 ವಾಣಿಜ್ಯ ಸಂಸ್ಥೆ, 32 ಹೋಟೆಲ್​, 16 ಆಸ್ಪತ್ರೆ, 11 ಶೈಣಿಕ ಸಂಸ್ಥೆ, 1 ಧೋಬಿ ಘಾಟ್​ ಸೇರಿ ಒಟ್ಟು 629 ಕಟ್ಟಡಗಳು ಹಾಗೂ ಪ್ರದೇಶಗಳು ನೊಂದಣಿಯಾಗಿವೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ಏನಿದು ಚಾಲೆಂಜ್​?

ನೀರಿನ ಉಳಿತಾಯಕ್ಕೆ ತಂತ್ರಾನ ಅಳವಡಿಕೆ, ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚಳ, ಕೊಳವೆಬಾವಿಗಳ ಬಳಕೆಯಲ್ಲಿ ಟೆಕ್ನಾಲಜಿ ಅನುಷ್ಠಾನ, ನೀರು ಇಂಗುಗುಂಡಿ ನಿರ್ಮಾಣ& ಈ ಅನುಷ್ಠಾನಗಳ ಬಗ್ಗೆ ಮಾಹಿತಿ ಕೊಡುವ ಮೂಲಕ ನೀರಿನ ಉಳಿತಾಯಕ್ಕೆ ಪಂಚಸೂತ್ರಗಳ ಪಾಲನೆ ಮಾಡಿದರೆ ಜಲಮಂಡಳಿ 'ಫೈವ್​ ಸ್ಟಾರ್​ ಗ್ರೀನ್​ ರೇಟಿಂಗ್​' ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net