ಜಲಮಂಡಳಿಯಿಂದ 2 ಸಾವಿರ ಮ್ಯಾನ್​ಹೋಲ್​ಗಳ ಸ್ವಚ್ಛತೆ; ಮಳೆನೀರಿನ ಸರಾಗ ಹರಿವಿಗೆ ಕ್ರಮ

BWSSB (1)
Published on

ಬೆಂಗಳೂರು: ಮಳೆಯಾಗುತ್ತಿದ್ದಂತೆ ನಗರದ ರಸ್ತೆ ಜಲಾವೃತಗೊಂಡು ವಾಹನಸವಾರರು ಭಯದಿಂದ ಸಾಗಬೇಕಾದ ಸ್ಥಿತಿ ಸೃಷ್ಟಿಯಾಗುತ್ತದೆ. ಈ ಸಮಸ್ಯೆ ನಿಯಂತ್ರಿಸಲು ಬೆಂಗಳೂರು ಜಲಮಂಡಳಿ ಮುಂದಾಗಿದ್ದು, ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ತನ್ನ ವ್ಯಾಪ್ತಿಯಲ್ಲಿರುವ ಬಹುತೇಕ ಮ್ಯಾನ್​ಹೋಲ್​ಗಳನ್ನು ಶುಚಿಗೊಳಿಸಿದೆ.

ಮ್ಯಾನ್​ಹೋಲ್​ ಹಾಗೂ ಒಳಚರಂಡಿಯಲ್ಲಿ ಸಿಕ್ಕಿ ಹಾಕಿಕೊಳ್ಳುವ ತಾಜ್ಯಗಳಿಂದ ಮಳೆನೀರು ಸರಾಗವಾಗಿ ಹರಿದು ಹೋಗಲು ಅಡತಡೆ ಉಂಟಾಗುತ್ತಿತ್ತು. ಈ ಸಮಸ್ಯೆ ಅರಿತ ಜಲಮಂಡಳಿ ಮಳೆಗಾಲದ ಆರಂಭಕ್ಕೂ ಮುನ್ನ ಏಪ್ರಿಲ್​ನಿಂದ ಹೂಳೆತ್ತುವ ಕಾರ್ಯ ನಡೆಸುತ್ತಿದೆ.

ಈವರೆಗೆ ಸುಮಾರು 3,591 ಮ್ಯಾನ್​ಹೋಲ್​ಗಳು ಹಾಗೂ 91 ಕಿ.ಮೀ. ಉದ್ದದ ಚರಂಡಿಗಳ ಹೂಳೆತ್ತುವ ಕಾರ್ಯ ಪೂರ್ಣಗೊಳಿಸಿದೆ. ಜತಗೆ ಅಪಾಯಕಾರಿ ಎನಿಸಿಕೊಂಡಿರುವ ಮ್ಯಾನ್​ಹೋಲ್​ಗಳನ್ನು ಗುರುತಿಸಿ, ಅವುಗಳನ್ನು ದುರಸ್ತಿ ಕೈಗೊಳ್ಳಲಾಗಿದೆ. ಮುಖ್ಯವಾಗಿ ತಗ್ಗಿರುವ ಪ್ರದೇಶ ಹಾಗೂ ಪ್ರಮುಖ ರಸ್ತೆಗಳಲ್ಲಿರುವ ಮ್ಯಾನ್​ಹೋಲ್​ಗಳಲ್ಲಿನ ಹೂಳನ್ನು ಎತ್ತಲಾಗಿದೆ. ಇದರಿಂದ ರಾಜಕಾಲುವೆಗೆ ಸರಾಗವಾಗಿ ಮಳೆನೀರು ಹರಿದುಹೋಗಲು ಸಾಧ್ಯವಾಗುತ್ತದೆ. ಮೇ ಅಂತ್ಯದ ವೇಳೆಗೆ ಇನ್ನಷ್ಟು ಮ್ಯಾನ್​ಹೋಲ್​ಗಳಲ್ಲಿ ತುಂಬಿಕೊಂಡಿರುವ ತ್ಯಾಜ್ಯಗಳನ್ನು ಹೊರತೆಗೆಯಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net