ಅನಧಿಕೃತ ನೀರಿನ ಸಂಪರ್ಕಗಳನ್ನು ಅಧಿಕೃತಗೊಳಿಸಿ: ಜಲಮಂಡಳಿ ಅಧ್ಯಕ್ಷ ಸೂಚನೆ

gh
Published on

ಬೆಂಗಳೂರು: ಅನಧಿಕೃತ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿ, ಅವುಗಳನ್ನು ಅಧಿಕೃತಗೊಳಿಸುವ ಮೂಲಕ ಜಲಮಂಡಳಿಯ ಆದಾಯ ಹೆಚ್ಚಿಸಲು ಕೈಜೋಡಿಸಬೇಕು ಎಂದು ಬೆಂಗಳೂರು ಜಲಮಂಡಳಿ ಅಧ್ಯ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗುತ್ತಿಗೆದಾರರ ಸಂ ಬುಧವಾರ ಆಯೋಜಿಸಿದ್ದ ಕಾವೇರಿ ತಾಯಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೀರು ಕೊಟ್ಟು ನಮ್ಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿರುವ ತಾಯಿಗೆ ಕೃತಜ್ಞತೆ ಸಲ್ಲಿಸುವುದು ಬಹಳ ಮುಖ್ಯ. ಇದೇ ರೀತಿಯಲ್ಲಿ ಮಂಡಳಿಯ ಗುತ್ತಿಗೆದಾರರು ಹಾಗೂ ಪ್ಲಂಬರ್​ಗಳು ಜಲಮಂಡಳಿಗೂ ಕೃತಜ್ಞತೆ ಸಲ್ಲಿಸುವುದಕ್ಕೂ ಆದ್ಯತೆ ನೀಡಬೇಕು.

ನೂರು ಕಿ.ಮೀ. ದೂರದಿಂದ ಜಲಮಂಡಳಿ ನಗರಕ್ಕೆ ನೀರು ಸರಬರಾಜು ಮಾಡುತ್ತಿದೆ. ಈ ಶುದ್ದ ನೀರನ್ನು ಸಮರ್ಪಕವಾಗಿ ಬಳಸುವ ಕ್ರಮಗಳಾದ ಏರೇಟರ್​ ಅಳವಡಿಕೆ ಹಾಗೂ ಪೋಲಾಗದಂತೆ ತಡೆಯಲು ಮಂಡಳಿಯೊಂದಿಗೆ ಕೈಜೋಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಜಲಮಂಡಳಿಯ ನೊಂದಾಯಿತ ಪ್ಲಂಬರ್​ಗಳ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜಲಮಂಡಳಿಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಎನ್​.ಚಂದ್ರಮೌಳಿ, ಪ್ರಧಾನಕಾರ್ಯದರ್ಶಿ ಜಿ. ಕುಮಾರ್​, ಉಪಾಧ್ಯ ಪಿ.ಎಲ್​.ಚಂದ್ರಶೇಖರ್​, ಗೌರವಾಧ್ಯಕ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net