ಬಿ.ವಿ.ನಾಯಕ ಮಾನ್ವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕೆ

b v nayak namination
ಮಾಜಿ ಸಂಸದ ಬಿ.ವಿ.ನಾಯಕ ಮಾನ್ವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರ ಚುನಾವಣಾಧಿಕಾರಿ ಪ್ರಕಾಶ ವಡ್ಡರಗೆ ನಾಮಪತ್ರ ಸಲ್ಲಿಸಿದರು. ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮಲ್ಲನಗೌಡ ನಕ್ಕುಂದಿ ಇತರರಿದ್ದರು.
Published on

ಮಾನ್ವಿ: ಮಾನ್ವಿ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ, ಮಾಜಿ ಸಂಸದ ಬಿ.ವಿ.ನಾಯಕ ಬುಧವಾರ ನಾಮಪತ್ರ ಸಲ್ಲಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಪ್ರಮುಖರಾದ ಮಲ್ಲನಗೌಡ ನಕ್ಕುಂದಿ, ಶರಣಪ್ಪಗೌಡ ಇದ್ದರು. ಕಳೆದ ಕೆಲ ದಿನಗಳಿಂದ ಮಾನ್ವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ಬುಧವಾರ ತೆರೆಬಿತ್ತು. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಬಿ.ವಿ.ನಾಯಕ ಹುಬ್ಬಳ್ಳಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದರು.


ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕ ಮೆರವಣಿಗೆಯಲ್ಲಿ ಆಗಮಿಸಿ ಚುನಾವಣಾಧಿಕಾರಿ ಪ್ರಕಾಶ ವಡ್ಡರಗೆ ಬುಧವಾರ ನಾಮಪತ್ರ ಸಲ್ಲಿಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಆರಂಭವಾಯಿತು. ಮಾಜಿ ಶಾಸಕ ಎನ್.ಎಸ್.ಬೋಸರಾಜು, ಪ್ರಮುಖರಾದ ಅಬ್ದುಲ್ ಗಫೂರ್ ಸಾಬ್, ಚುಕ್ಕಿ ಸೂಗಪ್ಪ ಸಾಹುಕಾರ, ಶರಣಯ್ಯನಾಯಕ ಗುಡದಿನ್ನಿ, ರಾಜಾ ವಸಂತ ನಾಯಕ, ಅಮರೇಶಪ್ಪ ಬಲ್ಲಟಗಿ, ದೊಡ್ಡಬಸಪ್ಪಗೌಡ, ವೀರಭದ್ರಗೌಡ ಭೋಗಾವತಿ, ಸೈಯದ್ ನಜೀರುದ್ದೀನ್ ಖಾದ್ರಿ ಇತರರು ಇದ್ದರು.


ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರಾಜಾ ಶ್ಯಾಮಸುಂದರ್ ನಾಯಕ ಚುನಾವಣಾಧಿಕಾರಿ ಪ್ರಕಾಶ ವಡ್ಡರ್‌ಗೆ ಬುಧವಾರ ನಾಮಪತ್ರ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಕೆ.ಶರಣಗೌಡ ಬಲ್ಲಟಗಿ, ಸೈಯದ್ ತಾಹೀರ್ ಮತವಾಲೆ ವಕೀಲ, ಬಸವರಾಜ ವಕೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net