ಮುಂಬೈನಲ್ಲಿ ಹೋಟೆಲ್​ ನಡೆಸುತ್ತಿದ್ದ ಕಾರ್ಕಳದ ಉದ್ಯಮಿ ಆತ್ಮಹತ್ಯೆ

Died
Published on

ಉಡುಪಿ: ಮುಂಬೈನಲ್ಲಿ ಹೋಟೆಲ್​ ನಡೆಸುತ್ತಿದ್ದ ಕಾರ್ಕಳ ಮೂಲದ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಿರ್ಗಾನ ಕೃಷ್ಣಬೆಟ್ಟು ನಿವಾಸಿ ಸುನೀಲ್​ ಶೆಟ್ಟಿ(45) ಮನೆಯಲ್ಲಿಯೇ ನಾಡಕೋವಿಯಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ.

ಸುನೀಲ್​ ಶೆಟ್ಟಿ ಪುಣೆಯಲ್ಲಿ ಹೋಟೆಲ್​ ಉದ್ಯಮ ನಡೆಸುತ್ತಿದ್ದರು. ಇತ್ತೀಚೆಗೆ ತೀವ್ರ ನಷ್ಟವುಂಟಾಗಿ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದರು. ಇದರಿಂದಾಗಿ ಖಿನ್ನತೆಗೆ ಜಾರಿದ್ದ ಸುನೀಲ್​ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net