ಈ ಸ್ಮಗ್ಲರ್ಸ್​ ಚಿನ್ನ ಎಲ್ಲಿಟ್ಟುಕೊಂಡಿದ್ರು ಗೊತ್ತೇ..? ಇಶ್ಶೀ...

Gold 18 Feb 20
Published on

ಚೆನ್ನೈ: ಚಿನ್ನ ಎಂದರೆ ಎಲ್ಲರಿಗೂ ಒಮ್ಮೆ ಮುಟ್ಟಿ ನೋಡಬೇಕು ಎನಿಸುತ್ತದೆ. ಆದರೆ ಇಲ್ಲಿ ಮೂವರು ಸ್ಮಗ್ಲರ್ಸ್​ಗಳಿಂದ ಸಿಕ್ಕ ಚಿನ್ನವನ್ನು ಮುಟ್ಟಿನೋಡಲು ಒಮ್ಮೆ ಹಿಂಜರಿಕೆ ಉಂಟಾಗುತ್ತದೆ. ಏಕೆಂದರೆ ಚಿನ್ನ ಕಳ್ಳಸಾಗಣೆಗೆ ಈ ಸ್ಮಗ್ಲರ್ಸ್​ ಕಂಡುಕೊಂಡ 'ದಾರಿ'ಯೇ ಅಂಥದ್ದು.

ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ ಮೊಹಮ್ಮದ್ ಮುಸ್ತಾಫಾ ಮೀರಾಸಾ ಮರೈಕ್ಕಯರ್​, ಶೌಬರ್ ಅಲಿ ಐನಾಜ್​ ಹಾಗೂ ಶೇಖ್​ ಅಬ್ದುಲ್ಲ ಹಬೀಬ್​ ಅಬ್ದುಲ್ಲ ಎಂಬ ಮೂವರು ಸ್ಮಗ್ಲರ್ಸ್ ಕಸ್ಟಮ್ಸ್​ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಎರಡು ಪ್ರತ್ಯೇಕ ವಿಮಾನಗಳಲ್ಲಿ ಚೆನ್ನೈಗೆ ಬಂದಿದ್ದ ಇವರನ್ನು ಕಸ್ಟಮ್ಸ್​ ಅಧಿಕಾರಿಗಳು ವಿಚಾರಣೆ ನಡೆಸಿ ತಪಾಸಣೆಗೆ ಒಳಪಡಿಸಿದಾಗ ಚಿನ್ನ ಕಳ್ಳಸಾಗಣೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಮೂವರೂ ಚಿನ್ನವನ್ನು ಪೇಸ್ಟ್ ಮಾಡಿ ಗುದನಾಳದಲ್ಲಿ ಇರಿಸಿಕೊಂಡು ತಂದಿದ್ದರು. ಜತೆಗೆ ಇವರು ಇನ್ನಿತರೆಡೆ ಅಡಗಿಸಿ ಇರಿಸಿಕೊಂಡಿದ್ದ ಚಿನ್ನವನ್ನೂ ಪತ್ತೆ ಮಾಡಿದ ಅಧಿಕಾರಿಗಳು, ಒಟ್ಟು 83.7 ಲಕ್ಷ ಮೌಲ್ಯದ 1.62 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net