

ಮಕ್ತಂಪುರದ ಬಾಲಾಜಿ ಗುಡಿ ಹತ್ತಿರ ದುಷ್ಕರ್ಮಿಗಳಿಂದ ಕೃತ್ಯ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸನ್‌ಸಿಟಿ ಕಲಬುರಗಿಯಲ್ಲಿ ಮತ್ತೇ ನೆತ್ತರು ಹರಿದಿದೆ. ಮಕ್ತಂಪುರ ಬಡಾವಣೆಯಲ್ಲಿ ಬುಧವಾರ ರಾತ್ರಿ ಖ್ಯಾತ ಟೇಲರ್‌ನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಕೊಲೆಯಿಂದಾಗಿ ನಗರದ ಸೂಪರ್ ಮಾರ್ಕೇಟ್ ವರ್ತಕರು ತಲ್ಲಣಿಸಿದ್ದಾರೆ.
ಸಂತೋಷ ಅಲಿಯಾಸ್ ಸುರೇಶ ಅಂಚಿ (೪೩) ಕೊಲೆಯಾದವರು. ಸೂಪರ್ ಮಾರ್ಕೇಟ್‌ನಲ್ಲಿರುವ ಬಿಎಸ್ ಟೇಲರ್ ಅಂಗಡಿಯ ಮಾಲೀಕರು. ಕೊಲೆಗೆ ಕಾರಣ ಗೊತ್ತಾಗಿಲ್ಲ.
ನಗರದ ಮಕ್ತಂಪುರದ ಭವಾನಿ ಗುಡಿಯ ಹತ್ತಿರದಲ್ಲಿ ಬುಧವಾರ ಸಂಜೆ ಹೋಗುತ್ತಿರುವಾಗ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ರಾಡ್‌ನಿಂದ ತಲೆ ಹೊಡೆದು, ಬಳಿಕ ಆತನ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯನ್ನು ಯಾರು ? ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ.
ಜನರು ನೋಡ ನೋಡುತ್ತಲೇ ದಾಳಿ ಮಾಡಿ ಮಾರಕಾಸ್ತçಗಳಿಂದು ಹೊಡೆದು ಪರಾರಿಯಾಗಿದ್ದಾರೆ ಎಂಬ ಸುದ್ದಿ ಹರಡುತ್ತಲೇ ಜನರು ಜಮಾಗೊಂಡರು. ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದರು. ಕುಟುಂಬದವರ ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸ್ ಆಯುಕ್ತ ಆರ್.ಚೇತನ, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಎಸಿಪಿ ಭೂತೇಗೌಡ, ಇನ್‌ಸ್ಪೆಕ್ಟರ್ ಸೋಮಶೇಖರ ಕಿರದಳ್ಳಿ ಮತ್ತು ಸಿಬ್ಭಂದಿ ಭೇಟಿ ನೀಡಿದರು.ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.