

ಮಂಡ್ಯ: ಬಸ್ಗಾಗಿ ಪ್ರಯಾಣಿಕರು ಕಾಯೋದು ಸಾಮಾನ್ಯ. ಆದರೆ, ಇಂದು ಪ್ರಯಾಣಿಕರಿಗಾಗಿ ಬಸ್ಗಳೇ ಕಾಯುತ್ತಿವೆ. ಹೌದು, ಸಕ್ಕರೆ ನಾಡಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ ಕೆಎಸ್ಆರ್ಟಿಸಿ ಬಸ್ಗಳು ಸಾಲುಗಟ್ಟಿ ನಿಂತಿವೆ.
ಬೆಳಗ್ಗೆಯಿಂದ ಈವರೆಗೆ ಕೇವಲ 15 ಬಸ್ಗಳು ಮಾತ್ರ ಪ್ರಯಾಣಿಕರನ್ನು ಕರೆದೊಯ್ದಿದೆ. ಬೆಂಗಳೂರು ಹಾಗೂ ಮೈಸೂರಿಗೆ ಮಾತ್ರ ಬಸ್ ಸಂಚಾರ ಇದೆ. ಪ್ರಯಾಣಿಕರಿಲ್ಲದೇ ತಾಲೂಕು ಕೇಂದ್ರಗಳಿಗೂ ಬಸ್ಗಳು ತೆರಳಲು ಸಾಧ್ಯವಾಗಿಲ್ಲ.
ಇವತ್ತು ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ತಾಲೂಕು ಕೇಂದ್ರಗಳಿಗೆ ತೆರಳಲು ಪ್ರಯಾಣಿಕರು ಬಾರದೇ ಇರುವ ಹಿನ್ನೆಲೆಯಲ್ಲಿ ಒಂದೇ ಒಂದು ತಾಲೂಕು ಕೇಂದ್ರಕ್ಕೂ ಬಸ್ಗಳು ತೆರಳಿಲ್ಲ.
ಒಂದು ಮಾರ್ಗಕ್ಕೆ ಕನಿಷ್ಠ 10 ರಿಂದ 15 ಜನ ಪ್ರಯಾಣಿಕರಿದ್ದರೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದರೆ ಆ ಮಾರ್ಗಕ್ಕೆ ಬಸ್ ಕಳುಹಿಸುತ್ತಿಲ್ಲ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.