More

    ಯಾರೂ ಊಹಿಸಿರದ ಗುಟ್ಟೊಂದನ್ನು ರಟ್ಟು ಮಾಡಿದ್ರೂ ಡೊನಾಲ್ಡ್​ ಟ್ರಂಪ್​…!

    ವಾಷಿಂಗ್ಟನ್​: ಜಾಗತಿಕವಾಗಿ ಮೃತ್ಯಕೂಪ ನಿರ್ಮಿಸಿಕೊಂಡು ಸಾವಿನ ರಣಕೇಕೆ ಹಾಕುತ್ತಿರುವ ಡೆಡ್ಲಿ ಕರೊನಾ ವೈರಸ್​, ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಹಿಂದೆಂದೂ ಕಂಡಿರದಂತಹ ಭೀತರತೆಯನ್ನು ಸೃಷ್ಟಿ ಮಾಡಿದೆ. ಭಾರಿ ಭೀತಿಯನ್ನು ಸೃಷ್ಟಿಸಿರುವ ಕರೊನಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರನ್ನು ನಡುಗಿಸಿದೆ ಎಂಬುದಕ್ಕೆ ಅವರು ಹೇಳಿದ ಮಾತುಗಳೇ ಸಾಕ್ಷಿಯಾಗಿದೆ.

    ಇದನ್ನೂ ಓದಿ: ಲಾಕ್​ಡೌನ್​​​ ವೇಳೆ ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದವ ಸಿಕ್ಕಿಬಿದ್ದಿದ್ದೇ ರೋಚಕ…!

    ಹೌದು, ಟ್ರಂಪ್​ ಅವರು ಸರ್ಪ್ರೈಸ್​ ಎನಿಸುವ​ ಹೇಳಿಕೆಯೊಂದನ್ನು ನೀಡಿದ್ದು, ಕೋವಿಡ್​ – 19 ವಿರುದ್ಧ ಮಲೆರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಯಾವುದೇ ಕೆಲಸ ಮಾಡುವುದಿಲ್ಲ ಎಂದು ತನ್ನದೇ ಸರ್ಕಾರದ ಪರಿಣಿತರು ಹೇಳಿದ್ದರು ಸಹ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಾಗಿ ಟ್ರಂಪ್​ ಬಾಯ್ಬಿಟ್ಟಿದ್ದಾರೆ.

    ಅಂದಹಾಗೆ ಟ್ರಂಪ್​ ಮಾತ್ರೆ ತೆಗೆದುಕೊಂಡಿದ್ದಾರೆ ಅಂದರೆ ಅವರಿಗೆ ಕರೊನಾ ಬಂದಿದೆಯಂತಲ್ಲ. ಅವರಿಗೆ ಕರೊನಾದ ಯಾವ ರೋಗ ಲಕ್ಷಣಗಳು ಕಂಡುಬಂದಿಲ್ಲ. ಬದಲಾಗಿ ಮುಂಜಾಗ್ರತಾ ಕ್ರಮವಾಗಿ ಒಂದೂವರೆ ವಾರ ಮಲೇರಿಯಾ ನಿರೋಧಕ ಮಾತ್ರೆಯನ್ನು ಸೇವಿಸಿದ್ದಾರೆ.

    ಇದನ್ನೂ ಓದಿ: ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಕೋರ ವೈದ್ಯ!

    ಝಿಂಕ್​ (ಸತು) ನೊಂದಿಗೆ ನಾನು ಪ್ರತಿದಿನ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಸೇವಿಸುತ್ತಿದ್ದೆ ಎಂದಿದ್ದಾರೆ. ಏಕೆ ಎಂದು ಪ್ರಶ್ನಿಸಿದಾಗ, ಅದು ಒಳ್ಳೆಯದು ಎನಿಸಿತು. ಅಲ್ಲದೇ ಅದರ ಬಗ್ಗೆ ಸಾಕಷ್ಟು ಒಳ್ಳೆಯ ವಿಚಾರಗಳನ್ನು ಕೇಳಿದ್ದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇನ್ನೊಂದೆಡೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಬಳಕೆಗೆ ಉತ್ತೇಜನ ನೀಡಲು ಟ್ರಂಪ್​ ಆಸಕ್ತಿ ತೆಳೆದಿದ್ದರೆ, ಕೆಲ ವೈದ್ಯರು ಕರೊನಾ ರೋಗಿಗಳಿಗೆ ಇದರಿಂದ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಜನರ ಕೈಗೇ ಕರೊನಾ ಕೀಲಿ; ಬೇಕಾಬಿಟ್ಟಿ ಓಡಾಡಿದರೆ ಅಪಾಯ ಖಚಿತ

    ಪಾಲಕರಿಗೆ ಹೆಚ್ಚುವರಿ ಶುಲ್ಕ ಬರೆ: 50ಕ್ಕೂ ಹೆಚ್ಚಿನ ಶಾಲೆಗಳ ವಿರುದ್ಧ ದೂರು, ಶಿಕ್ಷಣ ಇಲಾಖೆಯ ಸಹಾಯವಾಣಿಗೆ ಕರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts