ಹುಲುಗುಂದದಲ್ಲಿ ಬಸ್ ತಂಗುದಾಣ ಉದ್ಘಾಟನೆ

3spt1
Published on

ಸೋಮವಾರಪೇಟೆ: ರೋಟರಿ ಹಿಲ್ಸ್ ಸೋಮವಾರಪೇಟೆ ಮತ್ತು ರೋಟರಿ ಕುಶಾಲನಗರ ವತಿಯಿಂದ ಹಾರಂಗಿ ಡ್ಯಾಂ ಸಮೀಪದ ಹುಲುಗುಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕರ ಬಸ್ ತಂಗುದಾಣವನ್ನು ರೋಟರಿ ಜಿಲ್ಲಾ ಪ್ರಾಂತಪಾಲ ವಿಕ್ರಮ್ ದತ್ತ ಅವರು ಬುಧವಾರ ಉದ್ಘಾಟಿಸಿರು.

ನಂತರ ರೋಟರಿ ಜಿಲ್ಲಾ ಪ್ರಾಂತಪಾಲ ವಿಕ್ರಮ್ ದತ್ತ ಮಾತನಾಡಿ, ರೋಟರಿ ಸಂಸ್ಥೆಯೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ರೋಟರಿ ಸದಸ್ಯರು ಪ್ರತಿಫಲಾಪೇಕ್ಷೆಯಿಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜದ ಪ್ರತಿಯೊಬ್ಬರೂ ತಾವು ಸಂಪಾದಿಸಿದ ಹಣದಲ್ಲಿ ಅಲ್ಪ ಹಣವನ್ನು ಸಮಾಜಸೇವೆಗೆ ಉಪಯೋಗಿಸಿದರೆ ಅದು ಪುಣ್ಯ ಕಾರ್ಯ ಎಂದು ಹೇಳಿದರು.

ರೋಟರಿ ಸಹಾಯಕ ಪ್ರಾಂತಪಾಲ ಡಾ.ಹರಿ ಎ.ಶೆಟ್ಟಿ, ವಲಯ ಸೇನಾನಿ ಎಂ.ಎಂ.ಪ್ರಕಾಶ್ ಕುಮಾರ್, ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷ ಜೆ.ಕೆ.ಪೊನ್ನಪ್ಪ, ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ರೋಟರಿ ಕುಶಾಲನಗರ ಅಧ್ಯಕ್ಷ ಸಿ.ಬಿ.ಹರೀಶ್, ಕಾರ್ಯದರ್ಶಿ ಡಿ.ಡಿ.ಕಿರಣ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net