ಅಪಘಾತ ಪರಿಹಾರ ವಿಳಂಬ: ಎನ್‌ಡಬ್ಲುಕೆಎಸ್‌ಆರ್‌ಟಿಸಿ ಬಸ್‌ ಜಪ್ತಿ

bus-seizure
Published on

ಕಾರವಾರ: ಅಪಘಾತದ ಪರಿಹಾರ ನೀಡದ ಕಾರಣ ಹಾವೇರಿ ಘಟಕದ ಎನ್‌ಡಬ್ಲುಕೆಆರ್‌ಟಿಸಿ ಬಸ್‌ನ್ನು ಕುಮಟಾ ಜೆಎಂಎಫ್‌ಸಿ ನ್ಯಾಯಾಲಯದ ಸಿಬ್ಬಂದಿ ಶುಕ್ರವಾರ ಜಪ್ತಿ ಮಾಡಿದರು.
2018 ರಲ್ಲಿ ಹೊನ್ನಾವರ ಎಮ್ಮೆಪೈಲ್ ಎಂಬಲ್ಲಿ ಬಸ್ ಬಡಿದು ಸ್ಕೂಟಿ ಚಲಾಯಿಸುತ್ತಿದ್ದ ಕುಮಟಾ ಮೂಲದ ಭರತನಾಟ್ಯ ಶಿಕ್ಷಕಿ ಸೌಮ್ಯಾ ಭಟ್ಟ ಮೃತಪಟ್ಟಿದ್ದರು. ಪರಿಹಾರ ನೀಡುವಂತೆ ಮೃತರ ಪತಿ ದತ್ತಾತ್ರೆಯ ಭಟ್ಟ ಅವರು ಕುಮಟಾ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದ್ದರು. 20 ಲಕ್ಷ ರೂ. ಪರಿಹಾರ ನೀಡುವಂತೆ ಕುಮಟಾ ಜೆಎಂಎಫ್‌ಸಿ ನ್ಯಾಯಾಲಯ 2023 ರಲ್ಲಿ ಆದೇಶ ಹೊರಡಿಸಿತ್ತು. ಎನ್‌ಡಬ್ಲುಕೆಆರ್‌ಟಿಸಿ ನ್ಯಾಯಾಲಯಕ್ಕೆ 3 ಲಕ್ಷ ರೂ. ಭರಣ ಮಾಡಿತ್ತು. ಉಳಿದ ಹಣ ಭರಣ ಮಾಡುವಂತೆ ಸ್ವತಃ ನ್ಯಾಯಾಲಯದ ಸಿಬ್ಬಂದಿ ಹಾವೇರಿಗೆ ತೆರಳಿ ಸೂಚಿಸಿದರೂ ಸ್ಪಂದಿಸದ ಕಾರಣ ದತ್ತಾತ್ರೆಯ ಭಟ್ ಅವರು ಅಮಲು ಬಚಾವಣೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಸಿಬ್ಬಂದಿ ಹಾವೇರಿ ಇಡಗುಂಜಿ ಬಸ್‌ನ್ನು ಕುಮಟಾ ಬಸ್ ನಿಲ್ದಾಣದಲ್ಲಿ ಶುಕ್ರವಾರ ವಶಕ್ಕೆ ಪಡೆದು, ಪೊಲೀಸ್ ಠಾಣೆಯಲ್ಲಿ ಇರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net