ಶ್ಯಾನುಭೋಗನಹಳ್ಳಿಗೆ ಬಸ್ ಪುನರಾರಂಭ

ಶ್ಯಾನುಭೋಗನಹಳ್ಳಿಗೆ ಬಸ್ ಪುನರಾರಂಭ
Published on

ಅರಕಲಗೂಡು: ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮಕ್ಕೆ ಸೋಮವಾರ ಸಂಚಾರ ಪುನರಾರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಗ್ರಾಮಸ್ಥರು ಸ್ವಾಗತ ಕೋರಿದರು.

ಗ್ರಾಮದ ಮಹಿಳೆಯರು, ಮಕ್ಕಳು, ವೃದ್ಧರು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಬಸ್ ಸೌಲಭ್ಯ ಇಲ್ಲದೆ ಈ ಭಾಗದ ಗ್ರಾಮಸ್ಥರಿಗೆ ತೊಂದರೆ ಉಂಟಾಗಿತ್ತು. ಇದೀಗ ಕೆಎಸ್‌ಆರ್‌ಟಿ ಬಸ್ ಸಂಚಾರ ಗ್ರಾಮಸ್ಥರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕೂಡ ಕಲ್ಪಿಸಿದ್ದು ಪ್ರಯೋಜನಕ್ಕೆ ಬರಲಿದೆ. ಗ್ರಾಮಕ್ಕೆ ಈ ಹಿಂದೆ ಬರುತ್ತಿದ್ದ ಬಸ್ ಕಾರಣಾಂತರಗಳಿಂದ ನಿಲುಗಡೆಯಾಗಿತ್ತು. ಈಗ ಮರು ಸಂಚಾರ ಆಗಿರುವುದು ಸಂತಸ ತಂದಿದೆ. ಅರಕಲಗೂಡಿನಿಂದ ಶ್ಯಾನುಭೋಗನಹಳ್ಳಿ, ಮಾದಿಹಳ್ಳಿ, ಇಲ್ಲಹಳ್ಳಿ ಗ್ರಾಮದ ಮಾರ್ಗವಾಗಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಬಸ್ ಸಂಚರಿಸಲಿದೆ. ಇದರಿಂದ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ಪ್ರಯಾಣಕ್ಕೆ ಸುಗಮವಾಗಲಿದೆ ಎಂದರು. ಮುಖಂಡರಾದ ರಾಜೇಗೌಡ, ವಸಚಿತ್, ರಾಮು, ರಾಜೇಗೌಡ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net