

ಮುಂಡಗೋಡ: ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಯುವನಿದಿ ಅನುಷ್ಟಾನಕ್ಕೆ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡ ಬಸ್ ಗಳು ಹೋಗಿರುವ ಪರಿಣಾಮ ಶಿರಸಿ ಹುಬ್ಬಳ್ಳಿ ಹಾಗೂ ಗ್ರಾಮಿಣ ಭಾಗಗಳಲ್ಲಿ ಸಂಚರಿಸುವ ಬಸ್ ಗಳು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾವ೯ಜನಿಕರು ಪರದಾಡುತ್ತಿರುವದು ಕಂಡು ಬಂದಿತು.
ಮುಂಡಗೋಡ ತಾಲೂಕಿನಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಶಿರಸಿ ಹುಬ್ಬಳ್ಳಿ ಶಾಲಾ ಕಾಲೇಜುಗಳಿಗೆ ಹೋಗಿ ಬರುತ್ತಾರೆ ಇನ್ನೂ ಸಾವ೯ಜನಿಕರು ಸಹ ಹೆಚ್ಚಿನ ಪ್ರಮಾಣದಲ್ಲಿ ಹುಬ್ಬಳ್ಳಿ ಶಿರಸಿಗೆ ವಿವಿಧ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ಆದರೆ ಶುಕ್ರವಾರ ಕಡಿಮೆ ಪ್ರಮಾಣದಲ್ಲಿ ಬಸ್ ಗಳು ಸಂಚಾರ ನಡೆಸುತ್ತಿರುವ ಪರಿಣಾಮ ಸಾವ೯ಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಯಿತು.
ಮನೆಗೆ ಮರಳಿದ ವಿದ್ಯಾರ್ಥಿಗಳು: ಎಂದಿನಂತೆ ಶಿರಸಿ ಹುಬ್ಬಳ್ಳಿ ಶಾಲಾ ಕಾಲೇಜುಗಳಿಗೆ ತೆರಳು ಬಸ್ ನಿಲ್ದಾಣಕ್ಕೆ ಬಂದಿದ್ದ ವಿದ್ಯಾರ್ಥಿಗಳು ಎರಡು ತಾಸುಗಳ ಕಾಲ ಬಸ್ ಗಾಗಿ ಕಾಯ್ದು ನಿಂತರು ಬಸ್ ಬರಲಿಲ್ಲ ಇದರಿಂದ ಕಾಲೇಜುಗೆ ಹೋದರು ಮರಳಿ ಬರುವುದು ಕಷ್ಟವಾಗುತ್ತದೆ ಎಂದು ಅರಿತು ಬೇಸರದಿಂದ ಮನೆಗೆ ಮರಳಿದರು.ಅಲ್ಲದೆ ಕೆಲವು ಸಾವ೯ಜನಿಕರು ಸಹ ಬಸ್ ಇಲ್ಲದೆ ಮನೆಗೆ ಮರಳಿದರು.
ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್ ಗಳು ಸಹ ಕಡಿಮೆ ಇರುವುದು ಕಂಡು ಬಂದಿತು.ಗ್ರಾಮಿಣ ಭಾಗದ ಜನರು ವಿದ್ಯಾರ್ಥಿಗಳು ಸಹ ಬಸ್ ಇಲ್ಲದೆ ಪರದಾಡುತ್ತಿ ರುವದು ಕಂಡು ಬಂದಿತು. ಇನ್ನೂ ದೂರದ ಊರುಗಳಿಗೆ ತೆರಳುವ ಬಸ್ ಗಳು ಮಾತ್ರ ಎಂದಿನಂತೆ ಸಂಚರಿಸುತ್ತಿರುವುದು ಕಂಡು ಬಂದಿತು.
ಬಸ್ ಇಲ್ಲವೆಂದು ನಾಮಫಲಕ: ಶಿವಮೊಗ್ಗದಲ್ಲಿ ನಡೆಯುವ ಯುವನಿಧಿ ಕಾರ್ಯಕ್ರಮಕ್ಕೆ ಸಾರಿಗೆ ಬಸ್ಗಳು ಹೋಗಿರುವ ಪರಿಣಾಮ ದಿ. 12ರಂದು ಬಸ್ ಸಂಚಾರದಲ್ಲಿ ಅನಾನುಕೂಲತೆ ಆಗಲಿದ್ದು ಸಾವ೯ಜನಿಕರು ಸಹಕರಿಸುವಂತೆ ಬಸ್ ನಿಲ್ದಾಣ ಅಧಿಕಾರಿಯ ಕಚೇರಿಯ ಮುಂದೆ ಬರೆದು ನಾಮಫಲಕ ಹಾಕಲಾಗಿದೆ.
ಖಾಸಗಿ ವಾಹನಗಳ ಸಂಚಾರ: ಬಸ್ ಸಂಚಾರ ಕಡಿಮೆಯಾಗಿರುವುದನ್ನು ಕಂಡ ಖಾಸಗಿ ವಾಹನದವರು ಹುಬ್ಬಳ್ಳಿ, ಶಿರಸಿ,ಬಂಕಾಪುರ, ಯಲ್ಲಾಪುರ, ಕಲಘಟಗಿ ಗೆ ದುಪ್ಪಟ್ಟು ಹಣ ಪಡೆದು ಪ್ರಯಾಣಿಕರ ಸಾಗಾಟ ನಡೆಸಿದರು. ಹಳ್ಳಿಗಳಿಗೆ ತೆರಳುತ್ತಿದ
ಇದನ್ನೂ ಓದಿ: ಎಂಡೋಸಲ್ಫಾನ್ ಹುದುಗಿಸಿದ್ದೆಲ್ಲಿ..? ತನಿಖೆಗೆ ಒತ್ತಾಯ