ಪಲ್ಟಿ ಆಗಿ ಅಡಿಮೇಲಾದ ಬಸ್​; ಅಪಘಾತದ ಸಂದರ್ಭ ಬಸ್​ ಒಳಗಿದ್ದರು 30ಕ್ಕೂ ಹೆಚ್ಚು ಪ್ರಯಾಣಿಕರು!

Bus
Published on

ಗದಗ: ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​ ಒಂದು ಪಲ್ಟಿಯಾಗಿ ಸಂಪೂರ್ಣ ಅಡಿಮೇಲಾದ ಭಯಾನಕ ಅಪಘಾತವೊಂದು ಸಂಭವಿಸಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ಈ ಭೀಕರ ಅಪಘಾತಕ್ಕೆ ಒಳಗಾಗಿದ್ದು ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಇಳಕಲ್ ಮಾರ್ಗದ ಬಸ್​. ಅಪಘಾತ ಸಂಭವಿಸುವ ಸಂದರ್ಭ ಬಸ್​ನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರಿದ್ದರು. ಆದರೆ ಬಸ್​ ಪಲ್ಟಿಯಾಗಿ ಪೂರ್ತಿ ಅಡಿಮೇಲಾದರೂ ಬಸ್​ನೊಳಗಿದ್ದ ಅಷ್ಟೂ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಲ್ಟಿಯಾದ ಬಸ್​ನಿಂದ ಪ್ರಯಾಣಿಕರು ಗಾಜು ಒಡೆದು ಹೊರಗೆ ಬಂದಿದ್ದು, ಗಾಯಗೊಂಡವರನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನರಗುಂದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net