ಸೇತುವೆಯಿಂದ ಕೆಳಕ್ಕೆ ಬಿದ್ದ ಬಸ್​; ಇಬ್ಬರ ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ..

Bus 1
Published on

ಚಾಮರಾಜನಗರ: ಸಾರಿಗೆ ಸಂಸ್ಥೆಯ ಬಸ್ಸೊಂದು ಸೇತುವೆಯಿಂದ ಕೆಳಕ್ಕೆ ಬಿದ್ದು ಅಪಘಾತಗೊಂಡ ಪ್ರಕರಣದಲ್ಲಿ ಇಬ್ಬರು ಸಾವಿಗೀಡಾಗಿದ್ದು, ಇಬ್ಬರು ಗಂಭೀರ ಗಾಯಾಳುಗಳನ್ನು ಸೇರಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ. ಪಾಳ್ಯದ ಕುಡುವಾಳೆ ಹಳ್ಳದಲ್ಲಿ ಬಸ್​ ಪಲ್ಟಿಯಾಗಿ ಬಿದ್ದಿದೆ.

ಈ ಅಪಘಾತದಲ್ಲಿ ಬಸ್​ನಲ್ಲಿದ್ದ ಮಾಳಿಗನತ್ತ ಗ್ರಾಮದ ಶಿವಮ್ಮ (70), ಪಿ.ಜಿ. ಪಾಳ್ಯದ ರಮೇಶ್ (28) ಸಾವಿಗೀಡಾಗಿದ್ದಾರೆ. ಶಿವಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ರಮೇಶ್ ಕಾಮಗೆರೆ ಆಸ್ಪತ್ರೆಯಲ್ಲಿ ಸಾವಿಗೀಡಾದರು.

ಗಂಭಿರವಾಗಿ ಗಾಯಗೊಂಡಿರುವರನ್ನು ಪಿ.ಜಿ. ಪಾಳ್ಯ, ಕಾಮಗೆರೆ, ಕೊಳ್ಳೇಗಾಲ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಿ.ಜಿ. ಪಾಳ್ಯ ಗ್ರಾಮದ ಕಡೆ ತೆರಳುತ್ತಿದ್ದ ಬಸ್ ತಾಂತ್ರಿಕ ದೋಷದ ಕಾರಣದಿಂದಾಗಿ ಅಪಘಾತಕ್ಕೆ ಈಡಾಗಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net