ಗುಣಮಟ್ಟದ ಶಿಕ್ಷಣಕ್ಕೆ ಕೆಪಿಎಸ್ ಆರಂಭ : ಅಶೋಕ್ ಕುಮಾರ್ ರೈ ಹೇಳಿಕೆ

New Project (19)
Published on

ಉಪ್ಪಿನಂಗಡಿ: ರಾಜ್ಯದೆಲ್ಲೆಡೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲು ಸರ್ಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ತೆರೆಯುತ್ತಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಶಾಲೆಗಳು ಕೆಪಿಎಸ್ ಶಾಲೆಗಳಾಗಿ ಪರಿವರ್ತನೆಗೊಳ್ಳಲಿವೆ. ಕನಿಷ್ಠ 2 ಗ್ರಾಮಗಳಲ್ಲಿ ಒಂದು ಕೆಪಿಎಸ್ ಶಾಲೆಗಳನ್ನು ತೆರೆಯುವ ಯೋಜನೆ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಬಜತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಕೊಠಡಿ ಹಾಗೂ ಶಾಲಾ ಬಸ್ ಸೌಲಭ್ಯ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಗಂಗಾಧರ ಗೌಡ ಪಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವಿಮಲಾ ಬೆದ್ರೋಡಿ, ಉಮೇಶ್ ಓಡ್ರಪಾಲ್, ಪ್ರಸಿಲ್ಲಾ ಬೆಡ್ರೋಡಿ, ರತ್ನಾ, ರಾಮಚಂದ್ರ ಆಲಾಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಚಕ್ರಪಾಣಿ ಎ.ವಿ., ಯಶೋದಾ ವಿ., ಸಿದ್ದಪ್ಪ ನಾಯ್ಕ, ಧನಂಜಯ ಬಾರಿಕೆ, ರಾಜಾರಾಮ ಕೆ.ಬಿ., ನವೀನ್, ಯು.ಟಿ.ತೌಷಿಫ್, ಉದಯ ರಾವ್ ಮಣಿಕ್ಕಳ, ಗೋಪಾಲ ವಳಾಲ್, ಮಂಜುನಾಥ ಕೆ.ವಿ. ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ವಿಲ್ಫ್ರೆಡ್ ಡಿಸೋಜ ಪ್ರಸ್ತಾವನೆಗೈದರು.

ಶಿಕ್ಷಣ ಸಮನ್ವಯ ಟ್ರಸ್ಟ್ ಪ್ರಯತ್ನ

ಬಜತ್ತೂರು ಗ್ರಾಮದ ವಳಾಲು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾದಾಗ ಮಕ್ಕಳನ್ನು ಮತ್ತೆ ಸರ್ಕಾರಿ ಶಾಲೆಗೆ ಸೆಳೆಯಲು ಶಿಕ್ಷಣ ಸಮನ್ವಯ ಟ್ರಸ್ಟ್ ಎಂಬ ಸಂಸ್ಥೆ ಹುಟ್ಟು ಹಾಕಲಾಯಿತು. ಇದರ ಮೂಲಕ ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಆರ್ಥಿಕ ಸಹಕಾರ ಕೋರಲಾಯಿತು. ಆ ಮೂಲಕ ಟ್ರಸ್ಟ್ ಬಸ್ ಖರೀದಿಸಿದೆ. ಜತೆಗೆ ಸರ್ಕಾರಿ ಶಾಲೆಯಲ್ಲೇ ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಉಚಿತವಾಗಿ ಪಡೆಯುವಂತಾಗಲು ಟ್ರಸ್ಟ್ ಕಾರ್ಯೋನ್ಮುಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net