

ಉಡುಪಿ: ಪೆರ್ಡೂರು ಗ್ರಾಮದ ವಡ್ಡಾಮೇಶ್ವರ ಎಂಬಲ್ಲಿ ಸೋಮವಾರ ಬೆಳಗ್ಗೆ ಹೆಬ್ರಿ ಕಡೆಗೆ ತೆರಳುತ್ತಿದ್ದ ಬಸ್ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗೋವಿಂದ ಮೂಲ್ಯ ಎಂಬುವರು ಮೃತಪಟ್ಟಿದ್ದಾರೆ.
ಬೈರಂಪಳ್ಳಿ ಗ್ರಾಮದ ಕೃಷ್ಣ ಎಂಬುವರು ಪಿಕ್‌ಅಪ್‌ನಲ್ಲಿ ಇಂಟರ್‌ಲಾಕ್ ತುಂಬಿಸಿಕೊಂಡು ಮುಳ್ಳುಗುಡ್ಡೆಗೆ ಹೋಗುತ್ತಿದ್ದಾಗ, ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ಕರೆತರುವಾಗ ದಾರಿಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.