ಗೋವಾದಿಂದ ಮದ್ಯ ಸಾಗಣೆ ಕಲಬುರಗಿಯಲ್ಲಿ ಮಾಲು ಸಮೇತ ಬಸ್ ವಶ

Published on


ಕಲಬುರಗಿ ನಗರದ ಮಾರ್ಗವಾಗಿ ಗೋವಾ ಮದ್ಯವನ್ನು  ಹೈದರಾಬಾದ್‌ಗೆ  ಅಕ್ರಮವಾಗಿ  ಸಾಗಿಸುತ್ತಿದ್ದ  ೯ ಲೀಟರ್ ಮದ್ಯವನ್ನು  ಹಾಗೂ ಸಾಗಿಸುತ್ತಿದ್ದ ಬಸ್‌ನ್ನು ಅಬಕಾರಿ ಪೊಲೀಸರು ನಗರದ ಹೊರವಲಯದಲ್ಲಿ  ಬೆಳಗಿನ ಜಾವ ವಶಪಡಿಸಿಕೊಂಡಿದ್ದಾರೆ.
ಪಣಜಿಯಿAದ ಹೈದರಾಬಾದಗೆ ಹೋಗುತ್ತಿದ್ದ ಖಾಸಗಿ ಬಸ್‌ನಲ್ಲಿ  ಅಕ್ರಮವಾಗಿ ಮದ್ಯ ಸಾಗಣೆ ಮಾಡಲಾಗುತ್ತಿತ್ತು. ಬಾಟಲಿಗಳು ಹಾಗೂ ೪೫ ಲಕ್ಷ ಮೌಲ್ಯದ ಬಸ್ ಜಪ್ತಿ ಮಾಡಿಕೊಂಡು ತೆಲಂಗಾಣ ಮತ್ತು ಆಂಧ್ರಪ್ರದೇಶದÀ ಮುರಳಿಕೃಷ್ಣ ಸತ್ಯನಾರಾಯಣ, ಬನೋಥï ಬಾಳು,ಬನೋಥï ದೇವುಜಾ, ವೆಂಕಟೇಶ ಲಾಜರ್ ಎಂಬುವರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net