ಎಕ್ಸೆಲ್ ಕಟ್ಟಾಗಿ ರಸ್ತೆಯಲ್ಲೇ ವಾಲಿದ ಪ್ರಯಾಣಿಕರನ್ನು ತುಂಬಿದ ಬಸ್

Bus accident (1)
Published on

ಕಾರವಾರ: ಪ್ರಯಾಣಿಕರಿಂದ ತುಂಬಿದ ಬಸ್ ಸಂಚಾರದ‌ ವೇಳೆ ಎಕ್ಸೆಲ್ ಕಟ್ ಆಗಿದ್ದು, ಭಾರಿ ಅವಗಢ ತಪ್ಪಿದೆ.
ಕಾರವಾರದಿಂದ ಮಲ್ಲಾಪುರದೆಡೆಗೆ ಹೊರಟ ಬಸ್ ಹಬ್ಬುವಾಡ ರಸ್ತೆಯಲ್ಲಿ ದ್ವಾರಕಾ ಹೋಟೆಲ್ ಬಳಿ ಎಕ್ಸೆಲ್ ಕಟ್ ಆಗಿತ್ತು.
ಒಳಗೆ ಶಾಲೆಗಳಿಕೆ ತೆರಳುವ ಶಿಕ್ಷಕರು ಸೇರಿ, 50 ಕ್ಕೂ ಅಧಿಕ ಪ್ರಯಾಣಿಕರಿದ್ದರು. ಎಲ್ಲರೂ ಸಣ್ಣಪುಟ್ಟ ನೋವುಗಳಿಂದ ಪಾರಾಗಿದ್ದಾರೆ.
ಬಸ್ ನ ಹಿಂದಿನ‌ ಎರಡೂ ಗಾಲಿಗಳು ತುಂಡಾಗಿ ಬಿದ್ದಿದ್ದು, ಬಸ್ ವಾಲಿತ್ತು. ಸಾರ್ವಜನಿಕರು ಬಸ್ ಗೆ ಆಧಾರ ನೀಡಿ, ಒಳಗಿದ್ದ ಪ್ರಯಾಣಿಕರನ್ನು ಹೊರ ತೆಗೆದರು.
ಬಸ್ ರಸ್ತೆಯಲ್ಲಿ ಅಡ್ಡ ನಿಂತಿದ್ದು, ಕೆಲ ಕಾಲ ಹೆಬ್ಬುವಾಡ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು.ಕ್ರೇನ್ ತಂದು ಬಸ್ ತೆರವು ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net