More

    ಕರ್ನಾಟಕ ಸನಾತನ ಧರ್ಮ ರಕ್ಷಣಾ ವೇದಿಕೆ ಕಾರವಾರದಲ್ಲಿ ಪ್ರಾರಂಭ

    ಕಾರವಾರ: ಸನಾತನ ಧರ್ಮ ರಕ್ಷಣೆ ಉದ್ದೇಶದಿಂದ ರಾಜ್ಯಮಟ್ಟದ ಸನಾತನ ಧರ್ಮ ರಕ್ಷಣಾ ವೇದಿಕೆಯನ್ನು ಹುಟ್ಟು ಹಾಕಲಾಗುತ್ತಿದೆ ಎಂದು ವೇದಿಕೆಯ ಅಧ್ಯಕ್ಷ ಡಾ.ಗಜೇಂದ್ರ ನಾಯ್ಕ ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಭಾರತ ಖಂಡದಲ್ಲಿ ಬಹು ಸಂಖ್ಯಾತರು ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟವರು. ಜೀವಿ ಚರಾಚರಗಳನ್ನು ದೇವರು ಎಂದು ಕರೆದಿರುವುದು ಸನಾತನ ಧರ್ಮವಾಗಿದೆ.
    ಸಾಕಷ್ಟು ವಿದೇಶಿಗರ ದಾಳಿಯ ನಡುವೆ ಸನಾತನ ಧರ್ಮ ತನ್ನ ಮಹತ್ವ ಉಳಿಸಿಕೊಂಡು ಬಂದಿದೆ. ಆದರೆ, ಈಗ ವಿವಿಧ ಕಾರಣಗಳಿಗೆ ಧರ್ಮಕ್ಕೆ ಧಕ್ಕೆಯಾಗುವುದನ್ನು ತಡೆಯಲು ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಎಂಬ ರಾಜ್ಯಮಟ್ಟದ ಸಂಘಟನೆ ರಚಿಸಲಾಗಿದೆ ಎಂದರು.
    ಅಹಿಂಸಾವಾದಿಗಳು, ಮಾನವತಾವಾದಿಗಳು,
    ಗುರುಕುಲ ಪರಂಪರೆ ಹಾಳಾಗಿ ಮೆಕಾಲೆ ಶಿಕ್ಷಣ ಪದ್ಧತಿಯಿಂದ ಸನಾತನ ಸಂಸ್ಕಾರ ನಾಶವಾಗುತ್ತಿವೆ. ಧರ್ಮ ರಕ್ಷಣೆ ನಮ್ಮ ಮುಖ್ಯ ಕರ್ತವ್ಯವಾಗಿಟ್ಟುಕೊಂಡು ಕಾರವಾರದಿಂದ ಇಡೀ ರಾಜ್ಯಕ್ಕೆ ಸಂಘಟನೆ ವಿಸ್ತರಿಸುವುದು ನಮ್ಮ ಉದ್ದೆಶ ಎಂದರು.
    ಜಗತ್ತಿನಲ್ಲಿ‌ ಭಾರತ ವಿಶ್ವಗುರು ಸ್ಥಾನ ಪಡೆಯಬೇಕು. ಎಲ್ಲ ಧರ್ಮೀಯರಿಗೆ ಸಮಾನ ಹಕ್ಕು ಪ್ರತಿಪಾದನೆ, ಎಲ್ಲರಲ್ಲಿ ಪ್ರೇಮ, ಸೌಹಾರ್ದತೆ ಬೆಳೆಸುವುದು.‌ಕೋಮು ಗಲಭೆಗಳಿಗೆ ಆಸ್ಪದ ಕೊಡದೇ ಇರುವುದು. ಸನಾತನ ಧರ್ಮ ಆಚರಣೆಯಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಿದರೆ ಅದನ್ನು ವಿರೋಧಿಸುವುದು. ಪರಿಸರ, ಜೀವಿ ಚರಾಚರಗಳ ರಕ್ಷಣೆಗೆ ಕ್ರಮ ವಹಿಸುವುದು. ರಾಮ ರಾಜ್ಯ ಕಲ್ಪನೆ ಜಾರಿಗೆ ಕ್ರಮ. ಗೋ ಹತ್ಯೆ ಸಂಪೂರ್ಣ ನಿಷೇಧಕ್ಕೆ ಕ್ರಮ ವಹಿಸುವುದು. ಗೋ ಶಾಲೆ ಪ್ರಾರಂಭಿಸುವುದು. ನಿಸರ್ಗ ವಿಕೋಪ, ಅನಾವೃಷ್ಟಿ, ಅತಿವೃಷ್ಟಿಯ ಸಮಯದಲ್ಲಿ ಜಾತಿ, ಮತ, ಪಂಥ ಬೇಧವಿಲ್ಲದೇ ರಕ್ಷಣೆಗೆ ಧಾವಿಸುವುದು. ನೇತ್ರ ಚಿಕಿತ್ಸೆಯಂಥ ಜನ ಕಲ್ಯಾಣ ಕಾರ್ಯಕ್ರಮ ಜಾರಿಗೆ ತರುವುದು. ಸರ್ಕಾರಿ ನೌಕರರ ಲಂಚಾವತಾರ ಪ್ರತಿಭಟಿಸುವುದು. ಖಾಸಗಿ ಶಾಲೆಗಳ ಅಧಿಕ ಶುಲ್ಕ ವಸೂಲಿ ತಡೆಯುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದರು.
    ಸಂಘದ ಅಧ್ಯಕ್ಷ ಡಾ.ಗಜೇಂದ್ರ ನಾಯ್ಕ, ಉಪಾಧ್ಯಕ್ಷ, ದಿನಕರ್ ನಾಗೇಕರ್,ಜಂಟಿ ಕಾರ್ಯದರ್ಶಿ ಸುರೇಶ ಕೃಷ್ಣಾ ನಾಯ್ಕ ,
    ರಾಜ್ಯ ಸಮಿತಿ ಸದಸ್ಯ, ಕೃಷ್ಣಾನಂದ ತಾರಿ, ಯಶೋದಾ ಹೆಗಡೆ, ಸುರೇಶ ನಾಯ್ಕ, ಚಂದ್ರಕಾಂತ ನಾಯ್ಕ, ಶರದ್ ಬಾಂದೇಕರ್ , ಶಂಕರ ಗುನಗಿ, ಪ್ರಕಾಶ ನಾಯ್ಕ, ಅಶೋಕ ರಾಣೆ, ಬಾಬುರಾಯ ತಳೇಕರ್, ಮೊಹಮದ್ ಅಲಿ, ಸುಹಾಸ ಬಾಬು ತಳೇಕರ್, ದಿಲೀಪ ಎಂ.ಗೋವೇಕರ್, ವೆಂಕಟೇಶ ವೆರ್ಣೇಕರ್, ರಾಜೇಂದ್ರ ಎನ್.ನಾಯ್ಕ, ಸುರೇಶ ಆಚಾರಿ, ರಮೇಶ ಎಸ್.ನಾಯ್ಕ, ಮೋಹನ ತಳಪಣಕರ್ ಸುದ್ದಿಗೋಷ್ಠಿಯಲ್ಲಿದ್ದರು.

    ಇದನ್ನೂ ಓದಿ: ಇನ್ಮುಂದೆ 450 ರೂ.ಗೆ ಸಬ್ಸಿಡಿ ದರದಲ್ಲಿ ಸಿಗಲಿದೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts