ಬಸ್‌ ಮರಕ್ಕೆ ಡಿಕ್ಕಿ-22 ಜನರಿಗೆ ಗಾಯ

Bus-accident.
Published on

ಹಳಿಯಾಳ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ರಾಜ್ಯ ಹೆದ್ದಾರಿ ಪಕ್ಕದ ಮರಕ್ಕೆ  ಡಿಕ್ಕಿಯಾದ ಪರಿಣಾಮ 22 ಜನರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ಸಂಜೆ  ತಾಲೂಕಿನ ಕೆಸರೊಳ್ಳಿ ಗ್ರಾಮದ ಸಮೀಪ ನಡೆದಿದೆ‌.

ಕೆಎಸ್‌ಆರ್‌ಟಿಸಿ ಬಸ್ ದಾಂಡೇಲಿ ಯಿಂದ ಹಳಿಯಾಳ ಮಾರ್ಗವಾಗಿ ಬೈಲಹೊಂಗಲಕ್ಕೆ  ತೆರಳುತ್ತಿದ್ದಾಗ, ಹಳಿಯಾಳ ದಾಂಡೇಲಿ ರಾಜ್ಯ ಹೆದ್ದಾರಿಯ  ಕೆಸರೊಳ್ಳಿ  ಸಮೀಪ ಬರುತ್ತಿದ್ದಾಗ ಗಾಳಿ ಮಳೆಗೆ  ರಸ್ತೆಗೆ  ಬಿದ್ದಿರುವ ಗಿಡವನ್ನು ತಪ್ಪಿಸಲು ಹೋಗಿ  ಚಾಲಕನ ನಿಯಂತ್ರಣ ತಪ್ಪಿದ ಬಸ್ ನೆರವಾಗಿ ರಸ್ತೆ ಪಕ್ಕದ ಮರಕ್ಕೆ  ಡಿಕ್ಕಿಯಾಗಿದೆ.  ಪರಿಣಾಮ ಬಸ್ ನಲ್ಲಿದ್ದ  22 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅದೃಷ್ಟವಶಾತ್ ಜೀವಹಾನಿ ಸಂಭವಿಸದೆ ಇರುವುದು ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ‌. ಘಟನೆ ನಡೆದ ತಕ್ಷಣ ಗಾಯಾಳುಗಳನ್ನು ಹಳಿಯಾಳ  ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿ ತ್ವರಿತವಾಗಿ ಚಿಕಿತ್ಸೆ ನೀಡಲಾಯಿತು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net