

ಗುಂಡ್ಲುಪೇಟೆ: ತಾಲೂಕಿನ ಮಂಗಲ ಗ್ರಾಮದ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಎತ್ತುಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿದೆ.
ಗ್ರಾಮದ ಶಿವಯ್ಯ ಎಂಬುವರ ಜಮೀನಿನಲ್ಲಿ ಶನಿವಾರ ಮೇಯುತ್ತಿದ್ದ ಎತ್ತುಗಳ ಮೇಲೆ ಹುಲಿ ದಿಢೀರನೆ ದಾಳಿ ನಡೆಸಿದ್ದರಿಂದ ಒಂದು ಎತ್ತು ಸ್ಥಳದಲ್ಲೇ ಸಾವಿಗೀಡಾದರೆ ಮತ್ತೊಂದು ತೀವ್ರ ಗಾಯಗೊಂಡಿದೆ. ಅಕ್ಕಪಕ್ಕದ ಜಮೀನುಗಳಲ್ಲಿ ಕೆಲಸ ನಿರ್ವಹಿಸುತ್ತದ್ದ ರೈತರು ಜೊರಾಗಿ ಕೂಗಿಕೊಂಡಿದ್ದರಿಂದ ಹುಲಿ ಕಾಡಿನತ್ತ ಓಡಿಹೋಗಿದೆ.