ಮಹಾಲಕ್ಷ್ಮೀ ಲೇಔಟ್ ನಲ್ಲಿ ಯಾರು ಎಂದು ಕೇಳಿದ ಚಾಲಕನ ಮೇಲೆ ಗುಂಡು ಹಾರಿಸಿದ ವ್ಯಕ್ತಿ !

IMG-20230826-WA0037
Published on

ಮಹಾಲಕ್ಷ್ಮೀ ಏರಿಯಾಕ್ಕೆ ಹೊಸ ವ್ಯಕ್ತಿ ಕಂಡು ಯಾರೆಂದು ಪ್ರಶ್ನಿಸಿದ್ದಕ್ಕೆ ಗುಂಡು ಹಾರಿಸಿ ಬೆದರಿಕ ಹಾಕಿದ : ಸುದೈವದಿಂದ ಉಮೇಶ್ ಪಾರು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಏರಿಯಾದಲ್ಲಿ ಹೊಸ ವ್ಯಕ್ತಿಯನ್ನು ಕಂಡು ಯಾರೆಂದು ಪ್ರಶ್ನೆ ಮಾಡಿದ್ದಕ್ಕೆ ಚಾಲನ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ  ನಗರದ ಹುಮನಾಬಾದ ರಸ್ತೆಯಲ್ಲಿರುವ  ಮಹಾಲಕ್ಷಿö್ಮÃ ಲೇಔಟ್‌ನಲ್ಲಿ ನಡೆದಿದೆ. ಸುದೈವದಿಂದ ಗುಂಡು ತಗುಲಿಲ್ಲ. ಹೀಗಾಗಿ ಯಾವುದೇ ಗಾಯಗಳಾಗಿಲ್ಲ. ಈ ಘಟನೆ ಬಡಾವಣೆ ಜನರನ್ನು ಗಾಬರಿಗೊಳಿಸಿದೆ.
ಉಮೇಶ ಯಳವಂತಗಿ ಎಂಬಾತನೇ ಗುಂಡೇಟಿನಿAದ ಪಾರಾದ ವ್ಯಕ್ತಿ.  ರಘೋಜಿ ಫೈನಾನ್ಸ್ದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಮಹಾಲಕ್ಷಿö್ಮÃ ಲೇಔಟ್‌ನಲ್ಲಿರುವ ವಿರೇಶ ಮಠಪತಿ ಎಂಬುವರ ಮನೆಯಲ್ಲಿ ಬಾಡಿಗೆ ಪಡೆದುಕೊಂಡು ಕುಟುಂಬದವರೊAದಿಗೆ ವಾಸವಾಗಿದ್ದಾರೆ.

ತಡರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆಯಲ್ಲಿ ಅಪರಿಚಿತ ವ್ಯಕ್ತಿ ನಿಂತುಕೊAಡಿದ್ದರು. ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಕಂಡು ತಾವು ಯಾರು ಎಂದು ಕೇಳಿದ್ದಕ್ಕೆ ಕುಪಿತಗೊಂಡ ಆತ ನಾನ್ಯಾರು ಎಂದು ಗೊತ್ತಿಲ್ಲವೇ ಎಂದು ಕೇಳಿದಾಗ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ನಂತರ ಸ್ಕಾರ್ಪಿಯೋ ವಾಹನದಲ್ಲಿ ಬಂದ ವ್ಯಕ್ತಿ ಆತನ ಬಳಿಯಿದ್ದ ಗನ್‌ನಿಂದ ಗುಂಡು ಹಾರಿಸಿದ್ದಾನೆ.
ಉಮೇಶ ತನ್ನ ಸ್ನೇಹಿತ ಅಭಿಷೇಕ ಜತೆಗೆ ಬರುತ್ತಿದ್ದ ವೇಳೆಯಲ್ಲಿ ಸ್ಕಾರ್ಪಿಯೋದಲ್ಲಿ ಬಂದ ಸುನೀಲ್ ಎಂಬುವರ ನಡುವೆ ಮಾತಿನ ಚಕಿಮಕಿ ನಡದಿದೆ.  ಆಗ ಅಲ್ಲಿಯೇ ಇದ್ದ ಲಿಂಗರಾಜ ಎಂಬುವರ ಮನೆಯ ಮೇಲುಗಡೆ ಹತ್ತಿ ಹೋಗುತ್ತಿರುವಾಗ ಮತ್ತೇ ಯಾರು ಎಂದು ಕೇಳಿದಾಗ ಆತ  ಧಮ್ ಇದ್ದರೆ ಒಳಗೆ ಬಾ  ಯಾರೆಂದು ತೋರಿಸುತ್ತೇನೆ ಎಂದು ಹೇಳಿದ್ದಾನೆ. ಆತ  ಉಮೇಶ ಮೇಲೆ ಹೋಗಾದ ತನ್ನ ಬಳಿಯಿದ್ದ ಗನ್‌ನಿಂದ ಆತನ ಕಾಲಿಗೆ ಗುಂಡು ಹಾರಿಸಿದ್ದಾನೆ. ಆಗ ಈತ ತಪ್ಪಿಸಿಕೊಂಡಿದ್ದರಿAದ ಗುಂಡು ಗೋಡೆಗೆ ನಾಟಿದೆ.
ಗುಂಡಿನ ಶಬ್ದ ಕೇಳುತ್ತಲೇ ಹೊರಗಡೆ ನಿಂತಿದ್ದ ಅಭಿಷೇಕ  ಒಳಗೆ ಬಂದು ಜಗಳ ಬಿಡಿಸಿಕೊಂಡು ಉಮೇಶನನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ  ೧೧೨ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ರೋಜಾ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net