ಕಟ್ಟಡ ಸಾಮಗ್ರಿ ವಸ್ತು ಪ್ರದರ್ಶನ

20Anand7
Published on

ಗೋಕಾಕ: ನಗರದ ಮಹಾಲಕ್ಷಿ$್ಮ ಸಭಾಭವನದಲ್ಲಿ ಗೋಕಾಕ ಇಂಜಿನಿಯರ್ಸ್​ ಅಸೋಸಿಯೇಷನ್​ ಮತ್ತು ಯುಎಸ್​ ಕಮ್ಯೂನಿಕೇಷನ್​ ಸಹಯೋಗದೊಂದಿಗೆ ಆ.22ರಿಂದ 24ರವರಗೆ ಕಟ್ಟಡ ಸಾಮಗ್ರಿಗಳು, ಒಳ&ಹೊರ ವಿನ್ಯಾಸ ಮತ್ತು ಪೀಠೋಪಕರಣ, ಗೃಹಸಾಲ, ಬಿಲ್ಡ್​ಟೆಕ್​--&2025 ಸಮಗ್ರ ಕಟ್ಟಡ ಸಾಮಗ್ರಿ ಬೃಹತ್​ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಇಂಜಿನಿಯರ್ಸ್​ ಅಸೋಸಿಯೇಷನ್​ ಅಧ್ಯಕ್ಷ ಚಿದಾನಂದ ದೇಮಶೆಟ್ಟಿ ಹೇಳಿದರು.

ಗೋಕಾಕ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ದಿನದ ವಸ್ತು ಪ್ರದರ್ಶನದಲ್ಲಿ ಒಂದೇ ಸೂರಿನಡಿಯಲ್ಲಿ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್​, ಬ್ರಿಕ್ಸ್​, ಅಗ್ರಿಗೇಟ್​ ಎಂ ಸ್ಯಾಂಡ್​, ಸ್ಟೀಲ್​, ಪ್ಲಂಬಿಂಗ್​, ಟೈಲ್ಸ್​, ಪ್ಲೆವುಡ್​, ಇಂಟಿರಿಯರ್​&ಎಕ್ಸ್ಪೀರಿಯರ್​ ಪರಿಕರ, ಸೋಲಾರ್​ ಮತ್ತು ಎಲೆಕ್ಟ್ರಿಕಲ್​ ಉತ್ಪನ್ನ, ಗುಣಮಟ್ಟದ ಸೆಕ್ಯೂರಿಟಿ ಸಾಮಗ್ರಿ, ಯುಪಿವಿಸಿ ಡೋರ್ಸ್​ ಮತ್ತು ವಿಂಡೋಸ್​ ಪೇಂಟ್​ ಮತ್ತು ಅಡೆಸ್ಟೀವ್​, ವಾಟರ್​ ಪ್ರೂಫಿಂಗ್​ ಸೇರಿ ಹಲವು ವಿನ್ಯಾಸಗಳ ಸಾಮಗ್ರಿ ಸಿಗುತ್ತವೆ. ಪ್ರಾಪರ್ಟಿ ಸಂಬಂಧಿತ ಮಳಿಗೆ ತೆರೆಯಲಾಗಿದೆ. ಗ್ರಾಹಕರು ್ಲಾಟ್​ ಮತ್ತು ನಿವೇಶನ ಖರೀದಿಸಬಹುದು ಮತ್ತು ವಿಶೇಷ ಆಕರ್ಷಣೆಯಾಗಿ ಆಟೋ ಎಕ್ಸ್​ಪೋ ಆಯೋಜಿಸಲಾಗಿದೆ ಎಂದರು. ಆರ್​.ಎಂ. ಉತ್ತೂರ, ವಿನಾಯಕ ರಾವಳ, ಎಸ್​.ಡಿ. ಉಜ್ಜನಕೊಪ್ಪ, ಕೃಷ್ಣಾ ಕುರಬಗಟ್ಟಿ, ವಿಶ್ವನಾಥ ಮಾಸ್ತಿಹೊಳಿ, ಕಲ್ಮೇಶ ತೋಟದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net