ಪ್ರೀತಿ ತುಂಬಿದ ಸಮಾಜ ನಿರ್ಮಾಣ ಎಲ್ಲರ ಕರ್ತವ್ಯ: ಫಾ.ಜಾನ್ಸನ್ ಅಭಿಪ್ರಾಯ

Ull_Jamath
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ದೇವರು ಪ್ರೀತಿಯ ಸ್ವರೂಪವಾಗಿದ್ದು, ಅದೇ ದಾರಿಯಲ್ಲಿ ಮುಂದುವರಿಯಬೇಕಿದ್ದ ನಾವು ಹಣದ ಹಿಂದೆ ಬಿದ್ದ ಪರಿಣಾಮ ಪ್ರಸ್ತುತ ದಿನಗಳಲ್ಲಿ ಪ್ರೀತಿ ದೂರವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರೀತಿ ತುಂಬಿದ ಆದರ್ಶ ಸಮಾಜ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ ಎಂದು ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ.ಜಾನ್ಸನ್ ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ವತಿಯಿಂದ ಭಾನುವಾರ ಕಲ್ಲಾಪುವಿನಲ್ಲಿ ಆದರ್ಶ ಸಮಾಜದ ನಿರ್ಮಾಣ ಪ್ರವಾದಿ ಮುಹಮ್ಮದ್(ಸ) ಶಿಕ್ಷಣದ ಬೆಳಕಿನಲ್ಲಿ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಮುಖಂಡ ನವೀನ್ ನಾಯಕ್ ಮಾತನಾಡಿ, ಪ್ರತಿಯೊಂದು ಧರ್ಮದ ಉದ್ದೇಶ ದಯೆ. ದಯೆಯೇ ಇಲ್ಲದ ಧರ್ಮ ಅಗತ್ಯವಿಲ್ಲ. ಶಿಕ್ಷಣ, ಉದ್ಯೋಗ ಸಿಕ್ಕಾಗ ವ್ಯಕ್ತಿ ಮುಖ್ಯವಾಹಿನಿಗೆ ಬರುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಉಪನ್ಯಾಸಕ ಡಾ.ಮಹಮ್ಮದ್ ಮುಬೀನ್ ವಿಚಾರ ಮಂಡಿಸಿದರು. ಜಮಾಅತೇ ಇಸ್ಲಾಮೀ ಹಿಂದ್ ಮಂಗಳೂರು ಘಟಕಾಧ್ಯಕ್ಷ ಮಹಮ್ಮದ್ ಇಸ್ಹಾಕ್ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಇಸ್ಲಾಮೀ ಹಿಂದ್ ಉಳ್ಳಾಲ ಘಟಕಾಧ್ಯಕ್ಷ ಅಬ್ದುಲ್ ಕರೀಂ ಮುಖ್ಯ ಅತಿಥಿಯಾಗಿದ್ದರು. ಮುಝಮ್ಮಿಲ್ ಅಹ್ಮದ್ ಸ್ವಾಗತಿಸಿದರು. ಅಬ್ದುರ್ರವೂಫ್ ನಿರೂಪಿಸಿದರು.

ಇಂದು ಆಧುನಿಕ ತಂತ್ರಜ್ಞಾನದಿಂದ ಹೊಸ ಹೆಸರುಗಳನ್ನು ಬಳಸಿ ಹಿಂದಿನ ಕಾಲದಲ್ಲಿದ್ದ ಅನಾಚಾರಗಳನ್ನು ನಡೆಸಲಾಗುತ್ತಿದೆ. ಹಸಿವು, ಭಯ ಮುಕ್ತ, ಶಾಂತಿ, ನೆಮ್ಮದಿ, ನ್ಯಾಯಯುತ ಸಮಾಜ ಪ್ರವಾದಿ(ಸ) ಅವರು ಪ್ರತಿಪಾದಿಸಿದ್ದರು. ಬಡತನ ನಿರ್ಮೂಲನೆ ಮಾಡಿದ ಫಲವಾಗಿ ದಾನದ ಹಣ ಸ್ವೀಕರಿಸಲೂ ಜನರಿಲ್ಲದ ವಾತಾವರಣ ನಿರ್ಮಾಣವಾಗಿತ್ತು. ಮಹಮ್ಮದ್ ಇಸ್ಹಾಕ್, ಅಧ್ಯಕ್ಷರು, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು

ಮಹಮ್ಮದ್ ಇಸ್ಹಾಕ್, ಅಧ್ಯಕ್ಷರು, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net