ಮೂಲ್ಕಿ: ಗ್ರಾಮೀಣ ವಲಯದಲ್ಲಿ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ನೀಡುತ್ತಾ ಬಂದರೆ ಸಾಕುಪ್ರಾಣಿಗಳ ಆರೋಗ್ಯ ವೃದ್ಧಿ ಜತೆಗೆ ಅಪಾಯ ಇಲ್ಲವಾಗುತ್ತದೆ ಎಂದು ಪಶು ವೈದ್ಯಾಧಿಕಾರಿ ಗ್ರೀಷ್ಮಾ ರಾವ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಹಾಗೂ ಪಶುಪಾಲನಾ ಇಲಾಖೆ ಪಶು ಚಿಕಿತ್ಸಾಲಯ ಹಳೆಯಂಗಡಿ ಸಹಯೋಗದಲ್ಲಿ ಸಾಕು ನಾಯಿಗಳಿಗೆ ರೇಬಿಸ್ ಲಸಿಕಾ ಶಿಬಿರ ಪಡುಪಣಂಬೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು.
ಪಶು ವೈದ್ಯಾಧಿಕಾರಿ ಗ್ರೀಷ್ಮಾ ರಾವ್, ಸಹಾಯಕ ಸಿಬ್ಬಂದಿ ಮಮತಾ, ಪಶುಸಖಿ ಪದ್ಮಪ್ರಿಯಾ ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.