ಆರೋಗ್ಯಕರ ಕುಟುಂಬ ನಿರ್ಮಾಣ: ಶಿವಪ್ರಸಾದ್ ಮೈಲೇರಿ ಹೇಳಿಕೆ

Kdb_healthy family
Published on

ಕಡಬ: ದುಶ್ಚಟಗಳಿಗೆ ಬಲಿಯಾದ ವ್ಯಕ್ತಿಗಳನ್ನು ವ್ಯಸನಮುಕ್ತ ಮಾಡುವ ಮೂಲಕ ಆರೋಗ್ಯಕರ ಕುಟುಂಬ ನಿರ್ಮಾಣ ಮಾಡುವಲ್ಲಿ ಯೋಜನೆ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶಿವಪ್ರಸಾದ್ ಮೈಲೇರಿ ಹೇಳಿದರು.

ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ನವಜೀವನ ಸಮಿತಿ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ.ಸವಣೂರು ಅಧ್ಯಕ್ಷತೆ ವಹಿಸಿದರು. ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಸಂತೋಷ್ ಶುಭಹಾರೈಸಿದರು. ಉಡುಪಿ ಪ್ರಾದೇಶಿಕ ವಿಭಾಗ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ವಲಯಮಟ್ಟದಲ್ಲಿ ನವಜೀವನ ಸಮಿತಿ ರಚನೆ, ಮನೆ ಭೇಟಿ, ಫ್ರೀ ಕಾನ್ಫರೆನ್ಸ್ ಸಭೆ ಕುರಿತು ಮಾಹಿತಿ ನೀಡಿದರು.ನವಜೀವನ ಸಮಿತಿ ಸದಸ್ಯರಾದ ಸುಬ್ರಾಯ ಗೌಡ, ಕಮಲಾ ಸಂಜೀವ ಅನುಭವ ಹಂಚಿಕೊಂಡರು. ಸಮಿತಿ ಸದಸ್ಯರಿಗೆ ಜನಜಾಗೃತಿ ವೇದಿಕೆಯಿಂದ ಬ್ಯಾಜ್ ವಿತರಣೆ ಮಾಡಲಾಯಿತು. ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿಬಿರಾಧಿಕಾರಿ ದಿವಾಕರ್ ಪೂಜಾರಿ ಸ್ವಾಗತಿಸಿದರು. ರಮೇಶ್ ಕೆ ನಿರೂಪಿಸಿದರು. ಪ್ರೆಸಿಲ್ಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net