

ಕಕ್ಕೇರಿ: ಲಿಂಗನಮಠ ಕ್ರಾಸ್ನಿಂದ ಖಾನಾಪುರವರೆಗೆ, ಬೀಡಿಯಿಂದ ಪಾರಿಶ್ವಾಡವರೆಗೆ, ಪಾರಿಶ್ವಾಡ ಕ್ರಾಸ್ನಿಂದ ಚನ್ನಮ್ಮನ ಕಿತ್ತೂರುವರೆಗಿನ ರಸ್ತೆ ಅಭಿವದ್ಧಿ ಕಾಮಗಾರಿಗಳು ಗುಣಮಟ್ಟದಲ್ಲಿ ಹಾಗೂ ನಿಗದಿತ ಕಾಲಮಿತಿಯೊಳಗೆ ಮುಗಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಳಗುಪ್ಪ&ಬೆಳಗಾವಿ ರಾಜ್ಯ ಹೆದ್ದಾರಿಯ ಲಿಂಗನಮಠ ಕ್ರಾಸ್ ಹಾಗೂ ಕಕ್ಕೇರಿಯಿಂದ ಖಾನಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಪರಿಶೀಲಿಸಿ ಮಂಗಳವಾರ ನಡೆಸಿ ಮಾತನಾಡಿದರು. ಈ ರಸ್ತೆಗಳು ಉತ್ತರ ಕನ್ನಡ, ಧಾರವಾಡ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸುತ್ತವೆ. ಕಕ್ಕೇರಿ ಶ್ರೀ ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ರಸ್ತೆಗಳ ಅಭಿವದ್ಧಿಯಲ್ಲಿ ಹೆಚ್ಚಿನ ಒತ್ತು ನೀಡಿ ಗುಣಮಟ್ಟ ಕಾಪಾಡಿಕೊಂಡು ಸಕಾಲದಲ್ಲಿ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಹಿಂದುಳಿದ ಖಾನಾಪುರ ತಾಲೂಕಿನ ಸಮಗ್ರ ಅಭಿವದ್ಧಿಗಾಗಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಭಿವದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕೆಂದು ಸಚಿವರಲ್ಲಿ ವಿನಂತಿಸಿಕೊಂಡರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಚನ್ನಮ್ಮನ ಕಿತ್ತೂರು ೇತ್ರದ ಹಾಳಾದ ರಸ್ತೆಗಳ ಅಭಿವದ್ಧಿಗಾಗಿ ಸಚಿವರು ಹೆಚ್ಚಿನ ಅನುದಾನ ನೀಡಬೇಕು. ರಸ್ತೆ ದುರಸ್ತಿ ಕೆಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿಕೊಂಡರು.
ಅಖಿಲ ಕರ್ನಾಟಕ ರೆತ ಸಂ ಉಪಾಧ್ಯ ಕಿಶೋರ ಮಿಠಾರಿ ಅವರು, ಬೆಳೆ ಪರಿಹಾರ ಮಂಜೂರು ಮಾಡುವಂತೆ, ಬರಗಾಲ ೂಷಿಸಲು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮಕ್ಕಾಗಿ ಸಚಿವರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಖ್ಯಮಂತ್ರಿ ಜತೆ ಚರ್ಚಿಸಿ ಖಾನಾಪುರ ರೆತರಿಗೆ ಬರ ಪರಿಹಾರ ಮಂಜೂರು ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಪಿಕೆಪಿಎಸ್ ಅಧ್ಯ ಯಲ್ಲಪ್ಪ ಗುಪಿತ, ಲಿಂಗನಮಠ ಗ್ರಾಪಂ ಅಧ್ಯ ಕಾಶೀಂ ಹಟ್ಟಿಹೋಳಿ, ಪಾಂಡುರಂಗ ಮಿಟಗಾರ, ತಿಮ್ಮಣ್ಣ ವಡ್ಡರ, ಜಯವಂತ ತಾರಿಹಾಳ, ಸಂಜೀವಕುಮಾರ್ ಹುಲಕಾಯಿ, ಎಸ್.ಎಸ್.ಸೊಬರದ,
ಎಸ್.ಬಿ.ಸ್ಟೆ ಹಾಗೂ ಇತರರಿದ್ದರು.