ವಿದ್ಯುತ್ ತಂತಿ ತುಂಡಾಗಿ ಬಿದ್ದು, ಎಮ್ಮೆ ಸಾವನಪ್ಪಿದೆ

ವಿದ್ಯುತ್ ತಂತಿ ತುಂಡಾಗಿ ಬಿದ್ದು, ಎಮ್ಮೆ ಸಾವನಪ್ಪಿದೆ
Published on

ಮಳವಳ್ಳಿ: ತಾಲೂಕಿನ ಚಂದಳ್ಳಿ ಗ್ರಾಮದ ಹೊರವಲಯದಲ್ಲಿ ಮೇಯುತ್ತಿದ್ದ ಎಮ್ಮೆಯ ಮೇಲೆ ಗುರುವಾರ ಸಂಜೆ ವಿದ್ಯುತ್ ತಂತಿ ತುಂಡಾಗಿ ಬಿದ್ದು, ಎಮ್ಮೆ ಸ್ಥಳದಲ್ಲೇ ಸಾವನಪ್ಪಿದೆ.

ಗ್ರಾಮದ ಮಹಾದೇವಮ್ಮ ಎಂಬುವರು ತಮ್ಮ ಎಮ್ಮೆಯನ್ನು ಮೇಯಿಸುತ್ತಿದ್ದರು. ಈ ಸಂದರ್ಭ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಗಾಳಿಯ ರಭಸಕ್ಕೆ ತಂತಿ ತುಂಡಾಗಿದೆ ಬಿದ್ದಿದೆ ಎಂದು ತಿಳಿಸಿದ್ದಾರೆ. ಮಾಲೀಕರಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

====

16 ಎಂಎಲ್‌ವಿ 2

ಮಳವಳ್ಳಿ ತಾಲೂಕಿನ ಚಂದಳ್ಳಿ ಗ್ರಾಮದ ಹೊರವಲಯದ ಕೆರೆಯಂಗಳದಲ್ಲಿ ಗುರುವಾರ ಮೇಯುತ್ತಿದ್ದ ಎಮ್ಮೆಯ ಮೇಲೆ ವಿದ್ಯುತ್ ಕಂಬದಿಂದ ತಂತಿ ತುಂಡರಿಸಿ ಬಿದ್ದು ಎಮ್ಮೆ ಸಾವನ್ನಪ್ಪಿರುವುದನ್ನು ಚೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಗ್ರಾಮಸ್ಥರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net