ವಿವಿಧ ದತ್ತಿ ಪ್ರಶಸ್ತಿಗಳಿಗೆ ಶಿಫಾರಸು ಆಹ್ವಾನ

Kannada nadu
Published on

ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ರಾಜ್ಯಮಟ್ಟದ 14ನೇ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶದಲ್ಲಿ ಪ್ರದಾನ ಮಾಡಲಿರುವ ವಿವಿಧ ದತ್ತಿ ಪ್ರಶಸ್ತಿಗಳಿಗೆ ಅರ್ಹರನ್ನು ಶಿಫಾರಸು ಮಾಡುವಂತೆ ಕೋರಿದೆ.

ದೊಡ್ಡಬಳ್ಳಾಪುರದ ಎನ್. ರೇಣುಕಾ ನಾಗಪ್ರಿಯ ದತ್ತಿ (ಬೆಂಗಳೂರು ಹೊರತುಪಡಿಸಿ ಕುವೆಂಪು ಸಾಹಿತ್ಯ ಪ್ರಚಾರದಲ್ಲಿ ತೊಡಗಿರುವ ಸಂಘ-ಸಂಸ್ಥೆಗಳು, ಸಾಹಿತ್ಯ ರಚನೆ ಮಾಡಿದವರಿಗೆ), ಶ್ರೀರಾಂ ಕೆ. ಹನುಮಂತಯ್ಯ ಹೆಬ್ಬಗೋಡಿ ಗೋಪಾಲಪ್ಪ ಪುಸ್ತಕ ದತ್ತಿ ಬಹುಮಾನ (ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ/ಪ್ರಬಂಧ, ಸಂಶೋಧನಾ ಲೇಖನಗಳು), ಎಸ್. ಗುಣಸಾಗರಿ ಸಿ. ನಾಗರಾಜ್ ದತ್ತಿ (35 ವರ್ಷದ ಒಳಗಿನ ಯುವ ಬರಹಗಾರರಿಗೆ), ಕೆ. ಕೃಷ್ಣಮೂರ್ತಿ ಪೂಜಾರಿ ಪಾಳ್ಯ ದತ್ತಿ (ಸಾಮಾಜಿಕ ಮತ್ತು ಸಂಗೀತ ಕ್ಷೇತ್ರದ ಸಾಧಕರಿಗೆ), ಡಾ.ಕೆ. ರಮಾನಂದ ಅವರ ದತ್ತಿ (ಕಾದಂಬರಿ ರಚನೆಕಾರರಿಗೆ), ಪ್ರಮಿಳಾ ಫಾಲನೇತ್ರ ದತ್ತಿ (ಶಿಕ್ಷಣ ಕ್ಷೇತ್ರದ ಸಾಧಕರಿಗೆ), ಶ್ರೀ ಅನಿಕೇತನ ಶ್ರೀ ಮಾಯಣ್ಣ ದತ್ತಿ (30- 45 ವರ್ಷದ ಇಬ್ಬರು ಯುವ ಸಾಧಕರಿಗೆ), ಮಾಗಡಿ ಶ್ರೀಮತಿ ಕೌಸಲ್ಯ ಶ್ರೀ ಪಾನ್ಯಂ ನಟರಾಜ್ ಸಮಾಜ ಸೇವಾ ದತ್ತಿ ಪ್ರಶಸ್ತಿ (50 ದಾಟಿದ ಸಾಹಿತ್ಯ, ಸಂಗೀತ, ಸಮಾಜ ಸೇವಾನಿರತ ಇಬ್ಬರಿಗೆ) ಹಾಗೂ ಡಾ. ಕೃಷ್ಣಪ್ಪ ಕೋಡಿಪಾಳ್ಯ ದತ್ತಿ (ಪ್ರಗತಿಪರ ರೈತರು ಇಬ್ಬರಿಗೆ) ಪ್ರಶಸ್ತಿಗಾಗಿ ಸೆ.10ರೊಳಗೆ ಅರ್ಜಿ ಸಲ್ಲಿಸಬೇಕು. ವಿಳಾಸ: ಡಾ. ಸಿಸಿರಾ, ಕನ್ನಡ ಉಪನ್ಯಾಸಕ, ಶೇಷಾದ್ರಿಪುರ ಮೇನ್ ಪಿಯು ಕಾಲೇಜು, ಬೆಂಗಳೂರು- 20.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net