ಬೆಂ.ವಿವಿ: ಪರೀಕ್ಷೆ ನಡೆಸಿದ 12 ದಿನಗಳಲ್ಲೇ ಫಲಿತಾಂಶ ಪ್ರಕಟ

Bangalore university
Published on

ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ಪದವಿ ಪರೀಕ್ಷೆ ನಡೆಸಿದ 12 ದಿನಗಳಲ್ಲೇ ಫಲಿತಾಂಶವನ್ನು ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳಿಗೆ ಸಂತಸ ಸುದ್ದಿ ನೀಡಿದೆ.

ಬೆಂವಿವಿಯಲ್ಲಿ 6ನೇ ಸಮಿಸ್ಟರ್ ಬಿ.ಕಾಂ, ಬಿಬಿಎ ಮತ್ತು ಬಿಸಿಎ ಪದವಿಯ ಕೊನೆಯ ಪರೀಕ್ಷೆಯನ್ನು ಸೆ.11ರಂದು ಬರೆದಿದ್ದರು. ಇದರ ಫಲಿತಾಂಶವನ್ನು ಶನಿವಾರ (ಸೆ.23) ಪ್ರಕಟಿಸಿದೆ. ಈ ಮೂರು ಕೋರ್ಸ್‌ಗಳಿಂದ 72 ಪರೀಕ್ಷಾ ಕೇಂದ್ರಗಳಲ್ಲಿ 35 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ವಿದ್ಯಾರ್ಥಿ ಸ್ನೇಹಿಯಾಗಿ ಬದಲಾವಣೆ

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೇಗ ಫಲಿತಾಂಶ ನೀಡಿದಲ್ಲಿ ಮುಂದಿನ ವ್ಯಾಸಂಗಕ್ಕೆ ಹಾಗೂ ಉದ್ಯೋಗಕ್ಕೆ ಅನುಕೂಲವಾಗುವ ಉದ್ದೇಶದಿಂದ ಸಾಧ್ಯವಾದಷ್ಟು ತ್ವರಿತವಾಗಿ ಫಲಿತಾಂಶ ನೀಡಲು ಬೆಂವಿವಿ ಪರೀಕ್ಷಾ ವಿಭಾಗ ಮೊದಲೇ ಪ್ಲಾನ್ ಮಾಡಿದ್ದಾಗಿ ವಿವಿ ತಿಳಿಸಿದೆ.

ಈ ಕುರಿತು ಮಾತನಾಡಿದ ಬೆಂವಿವಿ ಕುಲಸಚಿವ(ಮೌಲ್ಯಮಾಪನ) ಡಾ.ಸಿ.ಶ್ರೀನಿವಾಸ್, ಪರೀಕ್ಷೆ ಮುಗಿದ ತಕ್ಷಣವೇ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಿಸಿ, ಮೌಲ್ಯಮಾಪನ ಮಾಡಿಸಿ ಫಲಿತಾಂಶವನ್ನು ಬೇಗ ನೀಡಿದ್ದೇವೆ. ಇದು ಕುಲಪತಿಗಳ ಮಾರ್ಗದರ್ಶನ ಹಾಗೂ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಲಿತಾಂಶವನ್ನುhttps://bangaloreuniversity.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net