ಅಣ್ಣನನ್ನು ರಕ್ಷಿಸಲು ಧಾವಿಸಿದ ತಮ್ಮನೂ ಸಾವು; ತೋಟದ ಬಾವಿ ಬಳಿ ಸಂಭವಿಸಿದ ದುರಂತ..

Brothers
Published on

ವಿಜಯಪುರ: ತೋಟದ ಬಾವಿ ಬಳಿ ಸಂಭವಿಸಿದ ದುರಂತವೊಂದರಲ್ಲಿ ಅಣ್ಣ-ತಮ್ಮ ಇಬ್ಬರೂ ಸಾವಿಗೀಡಾಗಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ.

ಇಂಡಿ ತಾಲೂಕಿನ ಮುದ್ದುಗೌಡ ಅಪ್ಪಾಸಾಹೇಬ್ ಪಾಟೀಲ್ (20) ಹಾಗೂ ಶಿವರಾಜ್ ಅಪ್ಪಾಸಾಹೇಬ್ ಪಾಟೀಲ್ (18) ಮೃತಪಟ್ಟ ಸಹೋದರರು. ಝಳಕಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದು, ಪ್ರಕರಣದ ದಾಖಲಾಗಿದೆ.

ಇಂದು ತೋಟದ ಬಾವಿಯ ಬಳಿಗೆ ಹೋಗಿದ್ದ ಸಹೋದರರ ಪೈಕಿ ಮುದ್ದುಗೌಡ ಮೋಟಾರ್ ಆನ್ ಮಾಡಿದಾಗ ವಿದ್ಯುತ್ ಶಾಕ್ ತಗುಲಿದೆ. ತಕ್ಷಣ ಅಣ್ಣ ಜೀವ ರಕ್ಷಣೆಗೆ ಧಾವಿಸಿದ ತಮ್ಮ ಶಿವರಾಜ್​, ಅಣ್ಣನನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ದುರದೃಷ್ಟವಶಾತ್ ಇಬ್ಬರಿಗೂ ವಿದ್ಯುತ್ ಶಾಕ್ ತಗುಲಿ ಸಾವಿಗೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net