ಇಬ್ಬರು ಮಕ್ಕಳ ಕಣ್ಣೆದುರೇ ಸಾವಿಗೀಡಾದ ತಂದೆ; ಮಕ್ಕಳಿಬ್ಬರಿಗೂ ಗಾಯ..

Accident
Published on

ಯಾದಗಿರಿ: ವ್ಯಕ್ತಿಯೊಬ್ಬರು ಮಕ್ಕಳಿಬ್ಬರ ಕಣ್ಣೆದುರೇ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಯಾದಗಿರಿ-ಷಹಾಪುರ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಕ್ಕಳಿಬ್ಬರಿಗೂ ಗಾಯಗಳಾಗಿವೆ.

ಯಾದಗಿರಿ ಜಿಲ್ಲೆಯ ಷಹಾಪುರದ ಸೋಮಣ್ಣ ಹಿಂದಿನಮನಿ (45) ಸಾವಿಗೀಡಾದ ವ್ಯಕ್ತಿ. ಇವರ ಜತೆಗಿದ್ದ ಮಕ್ಕಳಾದ ಮಹೇಶ (10) ಹಾಗೂ ಹನುಮಂತ (12) ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಷಹಾಪುರ ತಾಲೂಕಿನ ಸಗರ ಗ್ರಾಮದ ನಿವಾಸಿ ಸೋಮಣ್ಣ ಬೈಕ್​ನಲ್ಲಿ ಮಕ್ಕಳಿಬ್ಬರ ಜತೆಗೆ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್​ನ ಟಯರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದ್ದರಿಂದ ಅದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತ ಆಗುತ್ತಿದ್ದಂತೆ ಟ್ರ್ಯಾಕ್ಟರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ವಡಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net