ತಂಗಿಯ ಶೀಲ ಶಂಕಿಸಿ, ಕೊಲೆ ಮಾಡಿ ರೈಲು ಹಳಿ ಮೇಲೆ ಹೆಣವಿಟ್ಟು ಬಂದ ಅಣ್ಣ!

anna
Published on

ಬೆಂಗಳೂರು: ತಂಗಿಯ ಮೇಲಿನ ಅನುಮಾನದಿಂದಾಗಿ ಅಣ್ಣ ಆಕೆಯನ್ನು ಕೊಂದು, ಶವವನ್ನು ಬೆನ್ನ ಮೇಲೆ ಹೊತ್ತೊಯ್ದು, ರೈಲು ಹಳಿಯ ಮೇಲೆ ಮಲಗಿಸಿ ಬಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆತ ಶವವನ್ನು ಹೊತ್ತೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಟೋ ಚಾಲಕ ರವಿಕಿರಣ್ ತಂಗಿಯನ್ನೇ ಕೊಂದ ಆರೋಪಿ. ಆತನ ತಂಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳಂತೆ. ಈ ವಿಚಾರವಾಗಿ ಅಣ್ಣ ತಂಗಿಯ ನಡುವೆ ಜಗಳವಾಗಿದೆ. ಏಪ್ರಿಲ್​ 4ರಂದು ರಾತ್ರಿ ನಡೆದ ಜಗಳ ತಾರಕಕ್ಕೇರಿದ್ದು, ಗಲಾಟೆಯಲ್ಲಿ ತಂಗಿಯನ್ನು ಅಣ್ಣ ಕೊಂದಿದ್ದಾನೆ. ಆಕೆ ತೊಟ್ಟಿದ್ದ ಚೂಡಿದಾರದ ವೇಲಿಂದಲೇ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಲಾಗಿದೆ.

ಕೊಲೆ ಮಾಡಿದ ನಂತರ ಆಕೆಯ ಮೃತದೇಹವನ್ನು ಬೆನ್ನ ಮೇಲೆ ಹೊತ್ತೊಯ್ದು ರೈಲ್ವೆ ಹಳಿಯ ಬಳಿ ಚೀಲದಲ್ಲಿ ತುಂಬಿಟ್ಟು ಹೋಗಿದ್ದ. ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೈಯ್ಯಪ್ಪನಹಳ್ಳಿ ಪೊಲೀಸರು ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತಳ ಅಣ್ಣನನ್ನು ಕರೆಸಿ ವಿಚಾರಣೆ ನಡೆಸಿದಾಗ ಕೊಲೆಯ ವಿಚಾರ ಬೆಳಕಿಗೆ ಬಂದಿದೆ. ಇದೀಗ ಆರೋಪಿ ರವಿಕಿರಣ್​ನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net