

ಗುರುಪುರ: ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ 2023-24ನೇ ಸಾಲಿನ ವಿಶೇಷ ನೃತ್ಯ ಪರೀಕ್ಷೆಗಳ ಜೂನಿಯರ್ ವಿಭಾಗದಲ್ಲಿ ಬೃಂದಾ ಜಿ.ಪಿ. ಶೇ.94 ಫಲಿತಾಂಶದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಈಕೆ ವಾಮಂಜೂರು ಅಮೃತೇಶ್ವರ ನಾಟ್ಯಾಲಯ ಸಂಸ್ಥೆ ನೃತ್ಯ ಗುರು ವಿದುಷಿ ಚಿತ್ರಾಕ್ಷಿ ಅಜಿತ್ ಕುಮಾರ್ ಶಿಷ್ಯೆ. ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲಾ 8ನೇ ತಗರತಿ ವಿದ್ಯಾರ್ಥಿನಿ.ಗಂಗಾಧರ ಪಿ., ಮಮತಾ ಬಿ. ದಂಪತಿ ಪುತ್ರಿ.