ಪ್ರತಿಭಾ ಕಲೋತ್ಸವದಲ್ಲಿ ಎಸ್‌ಡಿಎಂ ಸಾಧನೆ

Bel_Pratibha Kalotsava
Published on

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಸಹಭಾಗಿತ್ವದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾಗಿರಿ ಮೂಡುಬಿದಿರೆಯಲ್ಲಿ ಪ್ರಥಮ ಬಾರಿಗೆ ನಡೆದ ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿಭಾ ಕಲೋತ್ಸವ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡಿದ್ದಾರೆ.

ಬುಲ್ ಬುಲ್ ವಿದ್ಯಾರ್ಥಿನಿ ಅನಘಾ ಎ.ಜಿ.ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ, ಕಥೆ ಹೇಳುವ ಸ್ಪರ್ಧೆಯಲ್ಲಿ ಬುಲ್ ಬುಲ್ ವಿದ್ಯಾರ್ಥಿನಿ ದಿಶಾ ಡಿ.ಎ. ದ್ವಿತೀಯ ಸ್ಥಾನ, ಜಾನಪದ ಗೀತೆಯಲ್ಲಿ ಗೈಡ್ಸ್ ವಿಭಾಗದಲ್ಲಿ ತೃತಿಯ ಸ್ಥಾನ, ಬೃಂದ ಗೈಡ್ಸ್ ವಿಭಾಗ ಚಿತ್ರಕಲೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಮುಖ್ಯಶಿಕ್ಷಕಿ ಹೇಮಲತಾ ಎಂ.ಆರ್.ಮಾರ್ಗದರ್ಶನದಲ್ಲಿ ಶಿಕ್ಷಕಿ ರಮ್ಯಾ ಬಿ.ಜಿ.ಅವರ ತರಬೇತಿ, ಗೀತಾ, ಸ್ಕೌಟ್ಸ್ ಮಾಸ್ಟರ್ ಮಂಜುನಾಥ್ ಸಹಕಾರದೂಂದಿಗೆ, ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ ಪ್ರಮೀಳ ಸೂಚನೆಯೊಂದಿಗೆ ಜಿಲ್ಲಾಮಟ್ಟದ ಸಮಗ್ರ ಪ್ರಶಸ್ತಿ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆಯಲು ಸಾಧ್ಯವಾಯಿತು. ಕಬ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಸತತ ಪ್ರಯತ್ನ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಾಧನೆಗೆ ಪ್ರೇರಣೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net