ಹಿರಿಯಡಕ ಡಿಗ್ರಿ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್ ಉದ್ಘಾಟನೆ

hbr
Published on

ಹೆಬ್ರಿ: ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಡಿಸಿದ್ದ ಬ್ರಿಡ್ಜ್ ಕೋರ್ಸ್‌ನ್ನು ಅಜ್ಜರಕಾಡು ಸ.ಪ್ರ.ದ. ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಸೋಜನ್ ಕೆ.ಜಾರ್ಜ್ ಉದ್ಘಾಟಿಸಿದರು.

ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಅಧ್ಯಕ್ಷತೆ ವಹಿಸಿದ್ದರು. ಎ.ವಿ.ಬಾಳಿಗ ಸಂಸ್ಥೆಯ ಆಪ್ತ ಸಮಾಲೋಚಕಿ ಸೌಜನ್ಯಾ ಕರುಣಾಕರ ಶೆಟ್ಟಿ ‘ಕೀಳರಿಮೆ ಮತ್ತು ಆಕರ್ಷಣೆಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಹಿರಿಯಡಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್, ಉಪಪ್ರಾಂಶುಪಾಲ ಪ್ರಕಾಶ್ ಪ್ರಭು, ಹಿರಿಯಡಕ ಪಿಎಸ್‌ಐ ಪುನೀತ್‌ಕುಮಾರ್, ಹಿರಿಯ ಶಿಕ್ಷಣ ತಜ್ಞ ಡಾ.ಎನ್.ಎಸ್.ಶೆಟ್ಟಿ, ಮಾಧವ ನಾಯ್ಕ, ಉಮೇಶ್ ಶೆಟ್ಟಿ, ದಯಾನಂದ ಮಲ್ಯ, ವಸಂತ ಶೆಟ್ಟಿ ಚೆನ್ನಿಬೆಟ್ಟು, ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ. ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸೌಮ್ಯಲತಾ ಸ್ವಾಗತಿಸಿದರು. ಅಪರ್ಣಾ ಕೆ.ಯು. ಅತಿಥಿ ಪರಿಚಯಿಸಿದರು. ಮೀನಾಕ್ಷಿ ನಾಯ್ಕ ವಂದಿಸಿದರು. ನಿಶ್ಚಿತಾ ಎಸ್.ಹೋಬಳಿದಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net