ಮದುವೆಯಾಗಿ ನಾಲ್ಕೇ ದಿನದಲ್ಲಿ ಪ್ರಿಯಕರನ ಜತೆ ನವವಿವಾಹಿತೆ ಪರಾರಿ!

marraige1
Published on

ಮೂಲ್ಕಿ: ಮದುವೆಯಾದ ನಾಲ್ಕೇ ದಿನಗಳಲ್ಲಿ ಯುವತಿಯೊಬ್ಬಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

ಮೂಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ ಅರ್ಜುನ್ ಎಂಬುವರ ಪುತ್ರಿ ಚೈತ್ರಾ ವಿವಾಹ ಡಿ.28ರಂದು ಪುನರೂರಿನ ಸಭಾಂಗಣವೊಂದರಲ್ಲಿ ಶಿಕ್ಷಕರೊಬ್ಬರೊಂದಿಗೆ ನಡೆದಿತ್ತು.

ಮದುವೆಗೆ ಮನೆಯವರು ಲಕ್ಷಾಂತರ ರೂ. ಖರ್ಚು ಮಾಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಯುವತಿ ಚಿನ್ನ, ನಗದು ಸಹಿತ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಜ.2ರಂದು ನಡುರಾತ್ರಿ ತಂದೆಯ ಮನೆಯಿಂದ ಪಲ್ಸರ್ ಬೈಕ್‌ನಲ್ಲಿ ಸ್ಥಳೀಯ ನಿವಾಸಿ ಜಗನ್ ಪೂಜಾರಿ ಯಾನೆ ಜಗ್ಗು ಎಂಬಾತನೊಂದಿಗೆ ತೆರಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಗುತ್ತಿಗೆದಾರರಾಗಿರುವ ಅರ್ಜುನ್ ಮನೆಯವರಿಗೆ ಜಗ್ಗುವಿನೊಂದಿಗೆ ಚೈತ್ರಾಳ ಪ್ರೀತಿ ಇದ್ದ ಬಗ್ಗೆ ತಿಳಿದಿದ್ದು, ಮಾತುಕತೆ ನಡೆದು ಆತನನ್ನು ತ್ಯಜಿಸುತ್ತೇನೆ ಎಂದು ಆಕೆ ತಿಳಿಸಿದ್ದರಿಂದ ಬೇರೆ ಮದುವೆ ಮಾಡಲು ಮುಂದಾಗಿದ್ದರು. ಈಗ ಪುತ್ರಿ ನಾಪತ್ತೆಯಾಗಿರುವ ಬಗ್ಗೆ ತಂದೆ ಮೂಲ್ಕಿ ಠಾಣೆಗೆ ದೂರು ನೀಡಿದ್ದಾರೆ. ಅತ್ತ ಘಟನೆಯಿಂದ ನೊಂದ ವರನ ತಂದೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net