ವಧು-ವರರ ಮುಖಾಮುಖಿ ಕಾರ್ಯಕ್ರಮ

gan-7
Published on

ಗಂಗೊಳ್ಳಿ: ಕುಂದಾಪುರ ತಾಲೂಕು ಪರಿಶಿಷ್ಟ ಜಾತಿ ವಧು-ವರರ ವೇದಿಕೆ, ಮೇಲ್ ಗಂಗೊಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ ಆಶ್ರಯದಲ್ಲಿ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ವಧು-ವರರ ಮುಖಾಮುಖಿ ಕಾರ್ಯಕ್ರಮ ಭಾನುವಾರ ನಡೆಯಿತು.

ನಿವೃತ್ತ ಮುಖ್ಯ ಶಿಕ್ಷಕ ರಾಮದಾಸ್ ಉಡುಪಿ ಉದ್ಘಾಟಿಸಿದರು. ವಧು-ವರರ ವೇದಿಕೆ ಅಧ್ಯಕ್ಷ ಮೋನಪ್ಪ ಆದ್ಯಪಾಡಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯೆ ಶಶಿಕಲಾ ಕಾಳಾವರ ಮಾತನಾಡಿದರು. ಮೇಲ್‌ಗಂಗೊಳ್ಳಿ ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ ಅಧ್ಯಕ್ಷ ಭಾಸ್ಕರ ಎಚ್.ಜಿ. ಸ್ವಾಗತಿಸಿದರು. ಪ್ರೇಮಾನಂದ ತಲ್ಲೂರು ಪ್ರಾರ್ಥಿಸಿದರು. ವೆಂಕಟ ಉಪ್ಪಿನಕುದ್ರು, ಲಕ್ಷ್ಮಣ ಬೈಂದೂರು ಸಹಕರಿಸಿದರು. ರಘುವೀರ ಕೆ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net