ಶಿಸ್ತಿನ ಬದುಕಿಗೆ ಕ್ರೀಡೆ ಅಗತ್ಯ

nitte
Published on

ಕಾರ್ಕಳ: ಮಾನವನ ಶಿಸ್ತಿನ ಬದುಕಿಗೆ ಕ್ರೀಡೆಯಲ್ಲಿ ತೊಡಗುವುದು ಅತಿ ಮುಖ್ಯ. ಕ್ರೀಡೆ ದೈಹಿಕ, ಮಾನಸಿಕವಾಗಿ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಡೈರೆಕ್ಟರ್ ಡಾ.ಸುಧೀರ್ ಎಂ ಹೇಳಿದರು.

ನಿಟ್ಟೆ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 39ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಉಪಪ್ರಾಂಶುಪಾಲ ಡಾ.ರಮೇಶ ಐ.ಮಿತ್ತಾಂತಾಯ ಅಧ್ಯಕ್ಷತೆ ವಹಿಸಿ, ಕ್ರೀಡೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇರುವುದಾದರೆ ವಿದ್ಯಾಲಯ ವತಿಯಿಂದ ಪೂರ್ಣ ಬೆಂಬಲವಿದೆ. ನಿಟ್ಟೆ ವಿದ್ಯಾಸಂಸ್ಥೆ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಾ ಬರುತ್ತಿರುವುದು ಸಂತೋಷದ ವಿಷಯ ಎಂದರು.

ಸಂಸ್ಥೆ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲೂಣ್ಕರ್, ಡೈರೆಕ್ಟರ್ ಪ್ರೊ.ಯೋಗಿಶ್ ಹೆಗ್ಡೆ, ಪರೀಕ್ಷಾ ಕಂಟ್ರೋಲರ್ ಡಾ.ಸುಬ್ರಹ್ಮಣ್ಯ ಭಟ್ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಗಣೇಶ ಪೂಜಾರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯಾ ಅತಿಥಿಯನ್ನು ಪರಿಚಯಿಸಿದರು. ಸೈಬರ್ ಸೆಕ್ಯೂರಿಟಿ ವಿಭಾಗ ಮುಖ್ಯಸ್ಥ ಡಾ.ರೋಶನ್ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಲಹೆಗಾರ ಶ್ಯಾಮ್ ಸುಂದರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net