ಬ್ರಿವರೇಜ್​ ವೇಸ್ಟ್​ ರಾಸುಗಳಿಗೆ ಮಾರಣಾಂತಿಕ!

Cow Farm
Published on

* ಹಸಿ ವೇಸ್ಟ್​ ಮಾರಾಟಕ್ಕೆ ಹಾಕಬೇಕಿದೆ ರ್ನಿಬಂಧ

* ಹೈನೋದ್ಯಮಕ್ಕೆ ಭಾರಿ ಹೊಡೆತ

ಗಂಗಾಧರ್​ ಬೈರಾಪಟ್ಣಣ ರಾಮನಗರ

ಉತ್ತುಂಗದಲ್ಲಿರುವ ರಾಜ್ಯ ಹೈನೋದ್ಯಮದ ಮೇಲೆ ಬ್ರಿವರೇಜ್​ ವೇಸ್ಟ್​ ಎನ್ನುವ ಅಪಾಯಕಾರಿ ತ್ಯಾಜ್ಯದ ಕರಿ ನೆರಳು ಸದ್ದಿಲ್ಲದೆ ಚಾಚಿದ್ದು, ಬಳಕೆ ಬಗ್ಗೆ ಅರಿವಿಲ್ಲದೆ ರೈತರು ರಾಸುಗಳನ್ನು ಅಪಾಯಕ್ಕೆ ದೂಡುತ್ತಿದ್ದಾರೆ.

ಮದ್ಯ ತಯಾರಿಕೆಗೆ ಬಳಕೆ ಮಾಡುವ ಕಾಳುಗಳು ತ್ಯಾಜ್ಯವಾಗಿ ಹೊರ ಬಂದ ನಂತರ ತೇವಾಂಶಸಹಿತವಾಗಿ ರಾಸುಗಳಿಗೆ ತಿನ್ನಲು ನೀಡುತ್ತಿರುವುದರಿಂದ ಒಂದೆಡೆ ರಾಸುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಜತೆಗೆ ವಿಷಕಾರಿ ಹಾಲು ಮನುಷ್ಯರ ಆರೋಗ್ಯಕ್ಕೂ ಮಾರಕವಾಗುತ್ತಿದೆ.

ಏನಿದು ಬ್ರಿವರೇಜ್​ ವೇಸ್ಟ್​ ?

ಮದ್ಯ ತಯಾರಿಕೆಯಲ್ಲಿ ಕೆಲವು ಕಾಳುಗಳನ್ನು ಬಳಕೆ ಮಾಡಲಾಗುತ್ತದೆ. ಕಾಳುಗಳಿಂದ ಮದ್ಯದ ಅಂಶ ಪಡೆದ ನಂತರ ಉಳಿಯುವ ತ್ಯಾಜ್ಯ ರೂಪದಲ್ಲಿ ಹೊರ ಬರುತ್ತದೆ. ಇದರಲ್ಲಿ ಒಣ ಮತ್ತು ತೇವಾಂಶ ಸಹಿತವಾದ ತಾಜ್ಯವಿದ್ದು, ಇದನ್ನು ಹಂದಿ, ಹಸುಗಳು ಮತ್ತು ಕೋಳಿಗಳಿಗೆ ಆಹಾರವಾಗಿ ಬಳಕೆ ಮಾಡಬಹುದಾಗಿದೆ. ಇತರ ಹಿಂಡಿಗಳಿಗಿಂತಲೂ ಪ್ರೋಟಿನ್​ ಅಂಶ ಹೆಚ್ಚಿದ್ದು, ಇದು ಹಾಲು ಉತ್ಪಾದನೆಗೆ ಸಹಕಾರಿ ಆಗಿದೆ.

ರೈತರಿಗೆ ವಂಚನೆ:

ಸಾಮಾನ್ಯವಾಗಿ ಬ್ರಿವರೇಜ್​ ತ್ಯಾಜ್ಯ ಬಳಕೆಗೆ ಯೋಗ್ಯವಾಗಿರುವುದು ಇದನ್ನು ಒಣಗಿಸಿದ ನಂತರವಷ್ಟೇ. ಹಸಿ ತಾಜ್ಯ ಬಳಕೆ ಮಾಡಿದರೆ ರಾಸುಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವರು ಹಣದಾಸೆಗಾಗಿ ಹಸಿ ತ್ಯಾಜ್ಯವನ್ನೇ ರೈತರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಇಂತಹ ಹಸಿ ತ್ಯಾಜ್ಯವನ್ನು ಹೆಚ್ಚೆಂದರೆ 48 ಗಂಟೆಗಳ ಒಳಗೆ ರಾಸುಗಳಿಗೆ ರ್ನಿದಿಷ್ಟ ಪ್ರಮಾಣದಲ್ಲಿ ನೀಡಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಪಶು ಆಹಾರದ ಬೆಲೆ ಹೆಚ್ಚಿರುವ ಕಾರಣ, ಕಡಿಮೆ ಬೆಲೆಗೆ ಸಿಗುವ ಹಾಗೂ ಹೆಚ್ಚು ಹಾಲು ಪಡೆಯಲು ಸಹಕಾರಿಯಾಗುವ ಬ್ರಿವರೇಜ್​ ಹಸಿ ತ್ಯಾಜ್ಯವನ್ನು ಹೆಚ್ಚು ಹೆಚ್ಚು ನೀಡುವ ಮೂಲಕ ರಾಸುಗಳನ್ನು ರೈತರು ಅರಿವಿಲ್ಲದಂತೆ ಸಾವಿನ ದವಡೆಗೆ ತಳ್ಳುತ್ತಿದ್ದಾರೆ.

ಆರೋಗ್ಯದ ಮೇಲೆ ಪರಿಣಾಮ

ಬ್ರಿವರೇಜ್​ ಹಸಿ ತ್ಯಾಜ್ಯ 48 ಗಂಟೆಗಳ ನಂತರ ಕೊಳೆಯಲು ಆರಂಭಿಸಿ, ಂಗಸ್​ (ಬೂಸ್ಟ್​) ಉತ್ಪತ್ತಿಯಾಗುತ್ತದೆ. ಆಸ್ಪರ್ಜಿಲಸ್​, ಕ್ಲಾಸ್ಟ್ರಿಡ್ರಿಯಮ್​ ಬಾಟುಲಿನಂ ನಂತಹ ಮಾರಣಾಂತಿಕ ಸೂಕ್ಷಾ$್ಮಣು ಜೀವಿಗಳು ದೇಹವನ್ನು ಸೇರಿಕೊಂಡು ರಾಸುಗಳ ಜೀವವನ್ನೇ ಬಲಿ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹಸಿ ಬ್ರಿವರೇಜ್​ ತ್ಯಾಜ್ಯವನ್ನು ಹೆಚ್ಚು ನೀಡುವುದರಿಂದ ರಾಸುಗಳ ದೇಹದಲ್ಲಿ ರ್ನಿಜಲೀಕರಣ, ಹೊಟ್ಟೆ ಉಬ್ಬರಿಸಿಕೊಳ್ಳುವುದು, ಉಸಿರಾಟದ ತೊಂದರೆ, ಹೊಳೆಯವ ಕಣ್ಣುಗಳು, ನರ ಮಂಡಲದ ಮೇಲೆ ಪರಿಣಾಮ ಉಂಟಾಗಿ ರಾಸುಗಳ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಲಿವರ್​, ಕಿಡ್ನಿಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಪಚನ ಕ್ರಿಯೆಯೂ ಕಡಿಮೆಯಾಗಿ ಹಾಲಿನ ಇಳುವರಿಯೂ ಕುಸಿಯುತ್ತದೆ. ಅಲ್ಲದೆ, ರಾಸುಗಳಲ್ಲಿ ಬಂಜೆತನ ಹೆಚ್ಚಾಗುತ್ತದೆ. ಇಂತಹ ಹಲವು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಯಾವುದೂ ಬೆಳಕಿಗೆ ಬರುತ್ತಿಲ್ಲ.

ಲಾಭದ ಆಸೆಯಿಂದ ನಷ್ಟದ ಕೂಪಕ್ಕೆ

ಪ್ರಸ್ತುತ ಮಾರುಕಟ್ಟೆಯಲ್ಲಿ 50 ಕೆಜಿ ತೂಕದ ಪಶು ಆಹಾರ 1200 ರೂ. ಮೀರಿದೆ. ತೇವಾಂಶ ಸಹಿತವಾದ ಬ್ರಿವರೇಜ್​ ತ್ಯಾಜ್ಯದ 50 ಕೆಜಿ ಮೂಟೆ ಕೇವಲ 500 ರೂ.ಗೆ ಸಿಗುತ್ತದೆ. ಜತೆಗೆ ಈ ತ್ಯಾಜ್ಯ ಹಾಕಿದ ನಂತರ ಹಾಲಿನ ಇಳುವರಿ ಹೆಚ್ಚುವುದರಿಂದ ರೈತರು ಕಡಿಮೆ ಬೆಲೆಗೆ ಸಿಗುವ ಬ್ರಿವರೇಜ್​ ತ್ಯಾಜ್ಯವನ್ನೇ ಬಳಕೆ ಮಾಡಲು ಮುಂದಾಗಿದ್ದಾರೆ. ಇದರ ಬಳಕೆಯಿಂದ ಕೆಲವೇ ತಿಂಗಳಲ್ಲಿ ರಾಸುಗಳ ಆರೋಗ್ಯ ಣಿಸುತ್ತದೆ. ಅಂತಿಮವಾಗಿ ರೋಗ ಪೀಡಿತ ಹಸುವನ್ನು 10&15 ಸಾವಿರ ರೂ. ಗಳಿಗೆ ಮಾರಾಟ ಮಾಡುವ ಸನ್ನಿವೇಶ ನಿರ್ಮಾಣವಾಗುತ್ತಿದೆ.

ಮಾರಾಟದಲ್ಲೂ ಮೋಸ

ಬ್ರಿವರೇಜ್​ ಹಸಿ ತಾಜ್ಯದಲ್ಲಿ ಶೇ.70 ನೀರಿನ ಅಂಶ ಇರುತ್ತದೆ. ಇದನ್ನು ತೆಗೆದು ಹಾಕಿದರೆ ಪ್ರತಿ ಕೆಜಿಗೆ ಕೇವಲ 300 ಗ್ರಾಂ ನಷ್ಟು ಮಾತ್ರ ತ್ಯಾಜ್ಯ ಸಿಗುತ್ತದೆ. ಇದಕ್ಕೆ ಪ್ರತಿ ಕೆಜಿಗೆ ಕನಿಷ್ಠ 12 ರೂ. ನಂತೆ ಮಾರಾಟ ಮಾಡಲಾಗುತ್ತದೆ. ಆದರೆ, ಕೆಎಂಎ್​ ಪಶು ಆಹಾರದಲ್ಲಿ ಶೇ.5 ಮಾತ್ರ ನೀರಿನ ಅಂಶವಿದ್ದು, ಪ್ರತಿ ಕೆಜಿಗೆ 950 ಗ್ರಾಂ ಆಹಾರ ಸಿಗುತ್ತದೆ. ಇದಕ್ಕೆ ತಗಲುವ ವೆಚ್ಚ 24 ರೂ. ಮಾತ್ರ. ಅಂದರೆ ರೈತರು ಗುಣಮಟ್ಟ ಉಳ್ಳ 950 ಗ್ರಾಂ ಪಶು ಆಹಾರಕ್ಕೆ 24 ರೂ. ನೀಡಿದರೆ, ರಾಸುಗಳಿಗೆ ಮಾರಕವಾಗುವ ಬ್ರಿವರೇಜ್​ ಹಸಿ ತ್ಯಾಜ್ಯಕ್ಕೆ 36 ರೂ. ಕೊಟ್ಟು ಖರೀದಿಸಿ ಮೋಸ ಹೋಗುತ್ತಿದ್ದಾರೆ.

ಒಣಗಿಸಿ ಬಳಸಬಹುದು

ಬ್ರಿವರೇಜ್​ ಹಸಿ ತಾಜ್ಯವನ್ನು ಬಳಕೆ ಮಾಡುವುದು ಅಪಾಯಕಾರಿಯಾಗಿದ್ದು, ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ರೈತರಿಗೆ ತಲುಪದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ, ಬ್ರಿವರೇಜ್​ ತ್ಯಾಜ್ಯವನ್ನು ಒಣಗಿಸಿ, ಮಾರಾಟ ಮಾಡಬೇಕು. ಪ್ರತಿ 10 ಕೆಜಿ ಮೇವಿನಲ್ಲಿ ಶೇ.15&20 ಒಣಗಿದ ತ್ಯಾಜ್ಯವನ್ನು ಬಳಕೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಒಂದು ವೇಳೆ ರೈತರಿಗೆ ಬ್ರಿವರೇಜ್​ ಹಸಿ ತ್ಯಾಜ್ಯ ಸಿಕ್ಕರೂ ಅದನ್ನು ಸಂಪೂರ್ಣವಾಗಿ ಒಣಗಿಸಿ, ರ್ನಿದಿಷ್ಟ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಬಹುದಾಗಿದೆ.

ಬ್ರಿವರೇಜ್​ ವೇಸ್ಟ್​ ಅನ್ನು ಒಣಗಿಸಿ ಶೇ.15&20 ಪ್ರಮಾಣದಲ್ಲಿ ಮಾತ್ರ ನೀಡಬಹುದು. ಹಸಿ ಬ್ರಿವರೇಜ್​ ವೇಸ್ಟ್​ ರಾಸುಗಳಿಗೆ ಮಾರಣಾಂತಿಕವಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಕ್ರಮವನ್ನು ಕೈಗೊಂಡು ರೈತರಿಗೆ ಅರಿವು ಮೂಡಿಸಬೇಕಿದೆ. > ಡಾ.ಎಚ್​.ಎಸ್​. ಮಧುಸೂದನ್​ಪಶು ಆಹಾರ ತಜ್ಞ, ಪಶು ವೈದ್ಯಕಿಯ ವಿಶ್ವ ವಿದ್ಯಾಲಯ, ಬೆಂಗಳೂರುಬ್ರಿವರೇಜ್​ ವೇಸ್ಟ್​ ಬಳಕೆ ಹಾಲಿನ ಉತ್ಪಾದನೆ ಹೆಚ್ಚಳ ಮಾಡಿದರೂ, ಇದು ಕೇವಲ ತಾತ್ಕಾಲಿಕ ಅಷ್ಟೇ. ನಮ್ಮ ಗಮನಕ್ಕೆ ಬಂದ ತಕ್ಷಣ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಸದ್ಯಕ್ಕೆ ಇದರ ಬಳಕೆ ವ್ಯಾಪಕವಾಗಿಲ್ಲ, ಈ ಸಂಬಂಧ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು. > ಡಾ.ಅಸಾದುಲ್ಲಾ ಷರೀಫ್ ಉಪನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net